ಪ್ರಧಾನಿ ಮೋದಿ ಕರೆಗೆ ಸಾಥ್ ಕೊಟ್ಟ BCCI ಗೆ ಶಾಕ್ ಕೊಟ್ಟ ಟ್ವಿಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದಿಂದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ವ್ಯಾಟ್ಸ್ಆ್ಯಪ್ ಡಿಪಿ, ಸೋಶಿಯಲ್ ಮಿಡಿಯಾದಲ್ಲಿ ಪ್ರೊಫೈಲ್ ಪಿಕ್ ತ್ರಿವರ್ಣ ಧ್ವಜ ಹಾಕುವಂತೆ ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರೊಫೈಲ್ ಪಿಕ್‌ನ್ನು ತ್ರಿವರ್ಣ ಧ್ವಜವಾಗಿ ಬದಲಿಸಿತ್ತು. ಆದ್ರೆ ಟ್ವಿಟರ್ ಬಿಸಿಸಿಐ ಶಾಕ್ ನೀಡಿದ್ದು, ಖಾತೆಯಿಂದ ಬ್ಲೂಟಿಕ್ ತೆಗೆದು ಹಾಕಿದೆ.

ಟ್ವಿಟರ್ ಹೊಸ ನಿಯಮದ ಪ್ರಕಾರ ಬ್ಲೂಟಿಕ್ ತೆಗೆದುಹಾಕಿದೆ. ಹೊಸ ನಿಯಮದ ಪ್ರಕಾರ ಪ್ರೊಫೈಲ್ ಬದಲಿಸಿದರೆ ಟ್ವಿಟರ್ ಪರಿಶೀಲನೆ ನಡೆಸಿ ಅಧಿಕೃತ ಖಾತೆಯನ್ನು ಖಾತ್ರಿಪಡಿಸಿಕೊಳ್ಳಲಿದೆ. ಬಳಿಕ ಬ್ಲೂಟಿಕ್ ಮರಳಿ ನೀಡಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ದಿನಗಳು ಹಿಡಿಯಲಿದೆ. ಸ್ವಾತಂತ್ರ್ಯ ದಿನಾಚರಣೆ ಬಳಿಕ ಮತ್ತೆ ಬಿಸಿಸಿಐ ತನ್ನ ಹಳೇ ಪ್ರೊಫೈಲ್ ಹಾಕಿದರೂ ಮತ್ತದೇ ಪ್ರಕ್ರಿಯೆ ಮುಂದುವರಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!