ಟ್ವಿಟರ್ ಕೊಟ್ರು, ಬ್ಲೂಸ್ಕೈ ಬಿಟ್ರು…: ಶಾಕ್ ಕೊಟ್ಟ ಜ್ಯಾಕ್ ಡೋರ್ಸ್‌ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಶ್ವದ ಅತೀ ದೊಡ್ಡ ಸಾಮಾಜಿಕ ಮಾಧ್ಯಮ ಟ್ವಿಟರ್ ಸಂಸ್ಥೆಯನ್ನು ಹುಟ್ಟುಹಾಕಿದ ಜ್ಯಾಕ್ ಡೋರ್ಸ್‌ ಎಲ್ಲರಿಗೂ ಪರಿಚಿತರು. ಸಣ್ಣದಾಗಿ ಶುರು ಮಾಡಿದ ಕಂಪೆನಿ ವಿಶ್ವದಲ್ಲೇ ತನ್ನ ಛಾಪು ಮೂಡಿಸಿತು. ಇದಾದ ಕೆಲವು ವಷಗಳ ಬಳಿಕ ದಿಢೀರ್ ಟ್ವಿಟರ್ ಸಂಸ್ಥೆಯನ್ನೇ ಮಾರಾಟ ಮಾಡಿದ್ದ ಜ್ಯಾಕ್ ಡೋರ್ಸೆ ನಿರ್ಧಾರ ಅಚ್ಚರಿಗೆ ಕಾರಣವಾಗಿತ್ತು.

ಬಳಿಕ ಬ್ಲೂಸ್ಕೈ ಅನ್ನೋ ಸಾಮಾಜಿಕ ಮಾಧ್ಯಮ ಸಂಸ್ಥೆ ಆರಂಭಿಸಲಾಗಿತ್ತು. ಈ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಜ್ಯಾಕ್ ಡೋರ್ಸೆ ಇದೀಗ ಮತ್ತೊಂದು ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಬ್ಲೂಸ್ಕೈ ಸಂಸ್ಥೆಯ ಬೋರ್ಡ್ ಸದಸ್ಯತ್ವಕ್ಕೆ ಜ್ಯಾಕ್ ಡೋರ್ಸೆ ರಾಜೀನಾಮೆ ನೀಡಿದ್ದಾರೆ.ಈ ನಿರ್ಧಾರದಿಂದ ಕಂಪನಿ ಕಂಗಾಲಾಗಿದೆ.

ಜ್ಯಾಕ್ ಡೊರ್ಸೆ ಬೋರ್ಡ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ, ಇದೀಗ ಬ್ಲೂಸ್ಕೈ ಕಂಪನಿ ಹೊಸ ಹಾಗೂ ಸಮರ್ಥ ಸದಸ್ಯರ ಹುಡುಕಾಟದಲ್ಲಿದೆ. ಶೀಘ್ರದಲ್ಲೇ ಹೊಸ ಸದಸ್ಯರು ನಮ್ಮ ತಂಡ ಸೇರಿಕೊಳ್ಳಲಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮ ಸಂಸ್ಥೆಯ ಬದ್ಧತೆಯಲ್ಲಿ ಯಾವುದೇ ರಾಜೀಯಾಗಲ್ಲ ಎಂದು ಬ್ಲೂಸ್ಕೈ ಹೇಳಿದೆ.

ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಖರೀದಿಸಿದ ಬಳಿಕ ಇದೀಗ ಎಕ್ಸ್ ಆಗಿ ಬದಲಾಗಿದೆ. ಆದರೆ ಟ್ವಿಟರ್ ಸಂಸ್ಥೆ ಹುಟ್ಟುಹಾಕಿ ವಿಶ್ವಾದ್ಯಂತ ಅತೀ ದೊಡ್ಡ ಸೋಶಿಯಲ್ ಮೀಡಿಯಾ ಸ್ಥಾನ ತಂದುಕೊಟ್ಟ ಕೀರ್ತಿ ಜ್ಯಾಕ್ ಡೊರ್ಸೆಗೆ ಸಲ್ಲಲಿದೆ. ಆದರೆ ಟ್ವಿಟರ್ ಮಾರಾಟಕ್ಕೂ ಮೊದಲೇ ಡೊರ್ಸೆ, ಟ್ವಿಟರ್‌ಗೆ ಪರ್ಯಾಯವಾಗಿ ಬ್ಲೂಸ್ಕೈ ಅನ್ನೋ ಸಂಸ್ಥೆ ಹುಟ್ಟು ಹಾಕಿದ್ದರು. ಸಹ ಸಂಸ್ಥಾಪಕರಾಗಿ ಸಂಸ್ಥೆಯನ್ನು ಒಂದೇ ವರ್ಷದಲ್ಲಿ ಕಟ್ಟಿ ಬೆಳಸಿದ್ದಾರೆ.2023ರ ನವೆಂಬರ್ ತಿಂಗಳಲ್ಲಿ ಬ್ಲೂಸ್ಕೈ 2 ಮಿಲಿಯನ್ ಬಳಕೆದಾರರನ್ನು ದಾಟಿತ್ತು.

ಬ್ಲೂಸ್ಕೈ ವಿಕೇಂದ್ರಿತ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದೀಗ ಒಪನ್ ಸೋರ್ಸ್ ಸೋಶಿಯಲ್ ಮಿಡಿಯಾ ಜಗತ್ತಿನಲ್ಲಿ ಬ್ಲೂಸ್ಕೈ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಬೆಳೆವಣಿಗೆ ನಡುವೆ ಜ್ಯಾಕ್ ಡೋರ್ಸೆ ನಿರ್ಗಮನ ಕಂಪನಿ ಬೋರ್ಡ್ ಸದಸ್ಯರಲ್ಲಿ ಅಚ್ಚರಿ ತಂದಿತ್ತು.

ಜ್ಯಾಕ್ ಡೊರ್ಸೆ ನಿರ್ಗಮನಕ್ಕೆ ಸ್ಪಷ್ಟ ಕಾರಣಗಳು ತಿಳಿದಿಲ್ಲ. ಈ ಕುರಿತು ಡೊರ್ಸೆ ಯಾವುದೇ ಕಾರಣ ನೀಡಿಲ್ಲ. ತಾನು ಬ್ಲೂಸ್ಕೈ ಮಂಡಳಿಯಲ್ಲಿ ಇಲ್ಲ ಅನ್ನೋದನ್ನು ಜ್ಯಾಕ್ ಡೊರ್ಸೆ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!