August 31, 2026
Monday, August 31, 2026
spot_img

ಆಟವಾಡುತ್ತಾ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರದ ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ.

ಸವಿತಾ ಮುನಿರಾಜು ಮಗಳು ದಕ್ಷ ಹಾಗೂ ಆಶಾ ಪ್ರದೀಪ್‌ ಮಗ ಧನುಷ್‌ ಮೃತ ದುರ್ದೈವಿಗಳು. ಇಬ್ಬರು ಮಕ್ಕಳು ಕೃಷಿ ಹೊಂಡದ ಬಳಿ ಆಟವಾಡಲು ಹೋದ ವೇಳೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ನಂತರ ಹೊರಬರಲು ಆಗದೇ ಮೃತಪಟ್ಟಿದ್ದಾರೆ.

ಅವರು ಹೊಂಡಕ್ಕೆ ಬಿದ್ದ ವೇಳೆ ಸುತ್ತ ಮುತ್ತ ಯಾವುದೇ ಜನರಿಲ್ಲದ ಕಾರಣ ಸಹಾಯಕ್ಕೆ ಧಾವಿಸಲು ಜನರಿಲ್ಲದಂತಾಗಿದೆ. ಕೃಷಿ ಹೊಂಡಕ್ಕೆ ಬೇಲಿ ಹಾಕದೇ ಇರುವ ಮಾಲೀಕ ಗುರುಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !