Tuesday, March 21, 2023

Latest Posts

ಟರ್ಕಿ ಭೂಕಂಪ ಭೀತಿ : ಮಧ್ಯಾರಾತ್ರಿ ಮತ್ತೆರಡು ಭಾರಿ ಕಂಪಿಸಿದ ಭೂಮಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟರ್ಕಿಯಲ್ಲಿ ಈಗಾಗಲೇ ಎದುರಾಗಿರುವ ವಿನಾಶಕಾರಿ ಭೂಕಂಪದಿಂದ ಸಂತಸ್ತ್ರರ ರಕ್ಷಣಾ ಕಾರ್ಯಾಚರಣೆಯಲ್ಲಿ ಸರ್ಕಾರ ತೊಡುಗಿರುವುದರ ನಡುವೆಯೇ, ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಸೋಮವಾರ ಮತ್ತೆ ಎರಡು ಬಾರಿ ಭೂಮಿ ನಡುಗಿದೆ.

ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ (EMSC) ಪ್ರಕಾರ, ಸೋಮವಾರ ಟರ್ಕಿಯ ಆಗ್ನೇಯ ಹಟೇ ಪ್ರಾಂತ್ಯದಲ್ಲಿ 6.4 ಮತ್ತು 5.8 ತೀರ್ವತೆಯ ಎರಡು ಭೂಕಂಪಗಳು ಸಂಭವಿಸಿವೆ.

ಸೋಮವಾರ ಸಂಜೆ ಸಂಭವಿಸಿದ ಭೂಕಂಪದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 213 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಂತರಿಕ ಸಚಿವ ಸುಲೇಮಾನ್ ಸೋಯ್ಲು ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾನಿಗೊಳಗಾದ ಕಟ್ಟಡಗಳಿಂದ ದೂರವಿರಲು ಸಾರ್ವಜನಿಕರಿಗೆ ಹೇಳಿದ್ದಾರೆ. ಸಿರಿಯಾದಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಟರ್ಕಿಯಲ್ಲಿ ಈ ತಿಂಗಳ ಆರಂಭದಲ್ಲಿ ಸಂಭವಿಸಿದ ಎರಡು ವಿನಾಶಕಾರಿ ಭೂಕಂಪಗಳಿಂದ 41,000 ಮತ್ತು ನೆರೆಯ ಸಿರಿಯಾದಲ್ಲಿ ಸಾವಿರಕ್ಕೂ ಹೆಚ್ಚು ಸಾವಿನ ಸಂಖ್ಯೆ ಕಂಡುಬಂದಿದೆ. ಈ ನಡುವೆ ಮತ್ತೆರಡು ಭಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಇನ್ನಷ್ಟು ಭೀತಿ ಹೆಚ್ಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!