2 ಗಂಟೆ ಅವಧಿಯೊಳಗೆ ಎರಡು ಬಾರಿ ಭೂಕಂಪ: ಭಯದಲ್ಲಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶುಕ್ರವಾರ ಬೆಳಗಿನ ಜಾವ ಎರಡು ಗಂಟೆಯೊಳಗೆ ನೇಪಾಳದಲ್ಲಿ ಎರಡು ಭೂಕಂಪಗಳು ಸಂಭವಿಸಿವೆ. ಒಂದು ಮಧ್ಯಮ ಮತ್ತು ಲಘು ಭೂಕಂಪ ಸಂಭವಿಸಿದೆ. ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 4.8 ರಷ್ಟಿತ್ತು, ರಾತ್ರಿ 11:58 ಕ್ಕೆ (ಸ್ಥಳೀಯ ಕಾಲಮಾನ) ಸಂಭವಿಸಿದೆ, ನಂತರ ಶುಕ್ರವಾರ ಮುಂಜಾನೆ 1:30 ಕ್ಕೆ 5.9 ರ ತೀವ್ರತೆಯೊಂದಿಗೆ ಮತ್ತೊಂದು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.8 ಮತ್ತು 5.9 ಅಳತೆಯ ಎರಡು ಭೂಕಂಪಗಳು ರಾತ್ರೋರಾತ್ರಿ ನೇಪಾಳವನ್ನು ಅಪ್ಪಳಿಸಿದವು ಎಂದು ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ನೇಪಾಳದ ಸುರ್ಖೇತ್ ಜಿಲ್ಲೆಯ ಭೂಕಂಪನ ಕೇಂದ್ರದ ಅಧಿಕಾರಿ ರಾಜೇಶ್ ಶರ್ಮಾ ಅವರು ಎರಡು ಭೂಕಂಪಗಳು ಪರಸ್ಪರ ಎರಡು ಗಂಟೆಗಳ ಒಳಗೆ ಸಂಭವಿಸಿವೆ ಎಂದು ಹೇಳಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಭೂಕಂಪದಿಂದ ಭಯಭೀತರಾದ ಜನರು ಮನೆಯಿಂದ ಓಡಿ ಬಂದರು. ನೇಪಾಳದಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪಗಳು ಆಗಾಗ ಸಂಭವಿಸುತ್ತಿವೆ. ಈ ವರ್ಷದ ಜನವರಿಯಲ್ಲಿ ರಿಕ್ಟರ್ ಮಾಪಕದಲ್ಲಿ 5.9ರಷ್ಟು ಭೂಕಂಪ ಸಂಭವಿಸಿತ್ತು. ಇದರ ಪರಿಣಾಮ ದೆಹಲಿ ಹಾಗೂ ರಾಜಸ್ಥಾನದಲ್ಲಿ ಕಂಪನ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!