September 27, 2026
Sunday, September 27, 2026
spot_img

ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ಭೂಕಂಪ: ಕಟ್ಟಡಗಳು ಧರೆಗೆ, ಮೃತದೇಹಗಳು ಒಳಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೆನೆಜುವೆಲಾ ಕರಾವಳಿಯ ಸಮೀಪ ಬುಧವಾರ ಸಂಜೆ ಎರಡು ಬಾರಿ ಭೀಕರ ಭೂಕಂಪ ಸಂಭವಿಸಿದೆ. ಇಡೀ ದೇಶ ಭೂಕಂಪದಿಂದ ನಲುಗಿದ್ದು, ಕರೆಂಟ್‌, ಇಂಟರ್ನೆಟ್‌ ಸಂಪರ್ಕ ಇಲ್ಲದಂತಾಗಿದೆ.

ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಭೂಕಂಪಗಳು ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಪರಿಣಾಮ ಅನೇಕ ಕಟ್ಟಡಗಳು ಕುಸಿದಿವೆ. ಅಲ್ಲದೇ ಸಾವಿರಾರು ಜನರು ಜೀವಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಓಡಿ ಬರಲು ಸಾಧ್ಯವಾಗದವರ ಸ್ಥಿತಿ ಬಗ್ಗೆ ಮಾಹಿತಿ ದೊರೆತಿಲ್ಲ.

ಮೊದಲ ಭೂಕಂಪವು ಮೊರೋನ್ ಪಟ್ಟಣದ ಸಮೀಪ ಸಂಭವಿಸಿದ್ದು, ಭೂಮಿಯ 22 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಅದರ ಬೆನ್ನಲ್ಲೇ ಇನ್ನೊಂದು 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಮೊರೋನ್‌ನ ನೈಋತ್ಯ ಭಾಗದಲ್ಲಿ ಪತ್ತೆಯಾಗಿದೆ.

ರಾಜಧಾನಿ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ತೀವ್ರವಾಗಿ ಅಲುಗಾಡಿದ ಪರಿಣಾಮ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಧಾವಿಸಿದರು. ಕೆಲ ಪ್ರದೇಶಗಳಲ್ಲಿ ಕಟ್ಟಡಗಳ ಗೋಡೆಗಳು ಕುಸಿದು ಬಿದ್ದಿದ್ದು, ರಸ್ತೆಗಳಲ್ಲಿ ಅವಶೇಷಗಳ ರಾಶಿ ಕಂಡುಬಂದಿದೆ. ಹಲವೆಡೆ ವಿದ್ಯುತ್ ಕಂಬಗಳು ಉರುಳಿದ್ದು, ಸಂಚಾರ ಹಾಗೂ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

Must Read