ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಎರಡು ಆನೆ ಪ್ರತ್ಯಕ್ಷ

ಹೊಸದಿಗಂತ ವರದಿ, ಮಂಡ್ಯ :

ಕಾಡು ತೊರೆದು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಎರಡು ಆನೆಗಳು ಮಂಡ್ಯದತ್ತ ಮುಖ ಮಾಡಿದ್ದು,ನಗರದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.

ಮಂಡ್ಯ -ಕಿರುಗಾವಲು ಮಾರ್ಗದ ಸದ್ವಿದ್ಯಾ ಶಾಲೆ ಸಮೀಪದ ಕಬ್ಬಿನ ಗದ್ದೆಯಲ್ಲಿ ಎರಡು ಆನೆಗಳು ಪ್ರತ್ಯಕ್ಷಗೊಂಡಿದ್ದು, ಆನೆಗಳನ್ನು ನೋಡಲು ಜನತೆ ಮುಗಿಬಿದ್ದಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಮಂಡ್ಯ ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡು ಭಯ ಮೂಡಿಸಿದ್ದ ಎರಡು ಆನೆಗಳು, ಸದ್ಯಕ್ಕೆ ಸೋಮವಾರ ರಾತ್ರಿಯಿಂದ ನಗರದ ಕಲ್ಲಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಸದ್ವಿದ್ಯಾ ಶಾಲೆ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.

ನಗರದ ಹೊರವಲಯದ ಮಳವಳ್ಳಿ ಸಂಪರ್ಕಿಸುವ ಹನಿಯಂಬಾಡಿ ರಸ್ತೆಯ ಸುತ್ತಮುತ್ತವಿರುವ ಗದ್ದೆ ಬಯಲಿನಲ್ಲಿ ಎರಡು ಆನೆಗಳು ತಿರುಗಾಡುತ್ತಿರುವ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಕಾಣುತ್ತಿದೆ.

ಮೊದಲು ಕಲ್ಲಹಳ್ಳಿ ವಿವಿ ನಗರ ಭಾಗದಲ್ಲಿ ಕಾಣಿಸಿಕೊಂಡಿರುವ ಆನೆಗಳು, ಇದನ್ನು ನೋಡಿದ ನಾಯಿಗಳು ಬೊಗಳಿವೆ, ಇದನ್ನು ನೋಡಿದ ಸ್ಥಳೀಯರ ಕಣ್ಣಿಗೆ ಆನೆಗಳು ಸಂಚರಿಸುತ್ತಿರುವುದು ಕಂಡು ಬಂದಿದೆ. ನಂತರ ನಗರದ ಹೊರವಲಯದ ಕಬ್ಬಿನ ಗದ್ದೆಯಲ್ಲಿರುವುದರಿಂದ ಅತ್ತ ಯಾರೂ ಸುಳಿಯದಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿ ಸ್ಥಳಲ್ಲಿಯೇ ಮೊಕ್ಕಂ ಹೂಡಿದ್ದಾರೆ.

ನಂತರ ಮಂಗಳವಾರ ರಾತ್ರಿ ವೇಳೆಗೆ ಕಾರ್ಯಾಚರಣೆ ನಡೆಸುವ ಅಧಿಕಾರಿಗಳು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಅಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!