June 12, 2026
Friday, June 12, 2026
spot_img

SHOCKING | ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾವಿನಹಣ್ಣನ್ನು ತಿಂದು ಅಸ್ವಸ್ಥರಾಗಿದ್ದ ಬೀದರ್‌ನ ಸಹೋದರಿಯರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಇಬ್ಬರು ಸಹೋದರಿಯರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಔರಾದ್‌ನ ಶೆಂಬಳ್ಳಿ ನಿವಾಸಿ ಭವಾನಿ ವೈಜಿನಾಥ ಮೇತ್ರೆ ಹಾಗೂ ಸಂಧ್ಯಾರಾಣಿ ಮೇತ್ರೆ ಮೃತಪಟ್ಟಿದ್ದಾರೆ.

ಮನೆಯಲ್ಲಿ ಊಟ ಮಾಡಿದ ನಂತರ ಇಡೀ ಕುಟುಂಬ ಮಾವಿನಹಣ್ಣನ್ನು ಸೇವಿಸಿದೆ. ಇದಾದ ನಂತರ ಎಲ್ಲರಿಗೂ ವಾಂತಿ ಬೇಧಿ ಆಗಿದೆ. ನಂತರ ಎಲ್ಲರನ್ನೂ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಧ್ಯಾ ಹಾಗೂ ಭವಾನಿ ಮೃತಪಟ್ಟಿದ್ದು, ಉಳಿದವರು ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ.

ಮಾವಿನ ಹಣ್ಣನ್ನು ಸೇವಿಸಿ ಮೃತಪಟ್ಟಿದ್ದಾರೆ ಎಂದರೆ ಇಡೀ ರಾಜ್ಯವೇ ಆಶ್ಚರ್ಯ ಪಡುತ್ತಿದೆ. ಇದು ಹೇಗೆ ಸಾಧ್ಯ ಎಂದು ಭಯಪಟ್ಟಿದೆ. ಇಬ್ಬರು ಸಹೋದರಿಯರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !