ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಮರವೂರಿನ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರಲ್ಲಿ ಇಬ್ಬರು ನೀರಲ್ಲಿ ಮುಳುಗಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಕೊಟ್ಟಾರ ಚೌಕಿಯ ನಿವಾಸಿ ಸುಮಿತ್(20) ಮತ್ತು ಉರ್ವ ಅಂಗಡಿ ಬಳಿಯ ನಿವಾಸಿ ಅನೀಶ್(19) ಕಾಣೆಯಾಗಿರುವ ಯುವಕರು.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಕೋಡಿಕಲ್ ನಿವಾಸಿ ಅರುಣ್(19), ಮಾಳೂರು, ಕೋಡಿಕಲ್ ನಿವಾಸಿ ದೀಕ್ಷಿತ್(18), ಕೊಟ್ಟಾರ ಚೌಕಿ ನಿವಾಸಿ ಸುಮಿತ್(20), ಉರ್ವ ಅಂಗಡಿ ನಿವಾಸಿ ಅನೀಶ್(19) ಎಂಬ ನಾಲ್ವರು ಸ್ನೇಹಿತರು ಮರವೂರಿನ ನದಿಯಲ್ಲಿ ಈಜುತ್ತಿದ್ದ ಸಂದರ್ಭ ಸುಮಿತ್ ಮತ್ತು ಅನೀಶ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ಬಜಪೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕ ದಳ ಮತ್ತು ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.