ಹೊಸದಿಗಂತ ವರದಿ ಕಲಬುರಗಿ:
ಕೆಇಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್‌ನ ಮೂವರು ಸಹಚರರನ್ನು ಪೋಲೀಸರು ಬಂಧಿಸಿದ್ದಾರೆ.
ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಶಿವಕುಮಾರ್, ಆರ್.ಡಿ.ಪಾಟೀಲ್ ತಂಗಿದ್ದ ಅಪಾರ್ಟ್ಮೆಂಟ್ ಮಾಲೀಕ ಶಂಕರಗೌಡ ಯಾಳವಾಳ ಹಾಗೂ ಸುಪರ್ ವೈಸರ್ ದಿಲೀಪ್ ಪವಾರ್ ಎಂಬ ಮೂವರು ಸಹಚರರನ್ನು ಪೋಲಿಸರು ಅರೆಸ್ಟ್ ಮಾಡಿದ್ದಾರೆ.
ಶಿವಕುಮಾರ್, ಆರ್.ಡಿ.ಪಾಟೀಲ್‌ನ ಆಪ್ತ ಮತ್ತು ಗುತ್ತಿಗೆದಾರನಾಗಿದ್ದ. ಈತನನ್ನು ಅಶೋಕ್ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್.ಡಿ.ಪಾಟೀಲ್ ಪರಾರಿಯಾದ ಬಳಿಕ ಶಿವಕುಮಾರ್ ಆತನ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದನು ಎಂದು ತಿಳಿದುಬಂದಿದೆ.
ಆರ್.ಡಿ.ಪಾಟೀಲ್ ಫೋನ್ ಕಾಲ್ ಹಿಸ್ಟರಿಯಲ್ಲಿ ಶಿವಕುಮಾರ್ ಸಂಪರ್ಕ ಹೊಂದಿದ್ದನು ಎಂಬ ಮಾಹಿತಿ ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ ಆರ್.ಡಿ.ಪಾಟೀಲ್ ಬಗ್ಗೆ ಸರಿಯಾಗಿ ಮಾಹಿತಿ ಪಡೆಯದೆ ಅಪಾರ್ಟ್‌ಮೆಂಟ್ ಬಾಡಿಗೆ ನೀಡಿದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕ ಶಂಕರಗೌಡ ಯಾಳವಾರ, ಸುಪರ್ ವೈಸರ್ ದಿಲೀಪ್ ಪವಾರ್ ನನ್ನು ಬಂಧಿಸಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ಔಷಧ ವ್ಯಾಪಾರಿಯಾಗಿರುವ ಶಂಕರಗೌಡ ಅವರಿಗೆ ಈ ಅಪಾರ್ಟ್‌ಮೆಂಟ್ ಸೇರಿದ್ದು, ಆರ್.ಡಿ.ಪಾಟೀಲ್ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದ ವೇಳೆ ಮನೆ ಬಾಡಿಗೆ ನೀಡಿ,ತ ಲೆ ಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.