ಪೊಲೀಸ್‌ನ್ನು ಚೇಸ್ ಮಾಡಿ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ ಯುವತಿ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ಹೆಲ್ಮೆಟ್ ಹಾಕದೇ ಹೋದರೆ, ನಿಲ್ಲಿಸಿ ಫೈನ್ ಕಟ್ಟಿಸಿ, ಹೆಲ್ಮೆಟ್‌ನಿಂದ ಜೀವ ಉಳಿಯುತ್ತದೆ ಎನ್ನುವ ಪಾಠ ಕಲಿಸುವ ಪೊಲೀಸರೇ ಹೆಲ್ಮೆಟ್ ಧರಿಸದಿದ್ರೆ?

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಮಹಿಳೆಯೊಬ್ಬರು ಕಾರ್‌ನಲ್ಲಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದ ಪೊಲೀಸ್‌ನ್ನು ಚೇಸ್ ಮಾಡಿದ್ದಾರೆ.

ಕಿಟಕಿ ತೆರೆದು ಹೆಲ್ಮೆಟ್ ಎಲ್ಲಿದೆ ಎಂದು ಕೂಗಿದ್ದಾರೆ, ಪೊಲೀಸ್‌ಗೆ ಮಹಿಳೆ ಹೇಳಿದ್ದ ಅರ್ಥವಾಗಿಲ್ಲ, ಅವರು ಮಹಿಳೆ ಏನಾದ್ರೂ ಅಡ್ರೆಸ್ ಕೇಳುತ್ತಿರಬಹುದು ಎನ್ನುವ ಆಲೋಚನೆಯಿಂದ ಗಾಡಿ ಸ್ಲೋ ಮಾಡಿದ್ದಾರೆ. ಆಗ ಮಹಿಳೆ ನಿಮ್ಮ ಹೆಲ್ಮೆಟ್ ಎಲ್ಲಿದೆ ಸರ್ ಎಂದು ಪ್ರಶ್ನಿಸಿದ್ದಾರೆ.

ಆಗ ಪೊಲೀಸ್ ಏನೂ ಕೇಳಿಸಿಲ್ಲ ಎಂಬಂತೆ ಗಾಡಿ ಸ್ಪೀಡ್ ಮಾಡಿ ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನಮಗೆ ಹೇಳುವ ಪೊಲೀಸರೇ ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

https://x.com/gharkekalesh/status/1722079646483927518?s=20

 

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!