200 ವರ್ಷಗಳ ಬಳಿಕ ಪತ್ತೆಯಾದ ಹಡಗು, ಅದರಲ್ಲಿತ್ತು ಕೋಟಿ ಕೋಟಿ ಮೌಲ್ಯದ ಚಿನ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮುದ್ರದ ಆಳದಲ್ಲಿ ಬರೋಬ್ಬರಿ $ 17 ಬಿಲಿಯನ್ ಬೆಲೆ ಬಾಳುವ ದೊಡ್ಡ ಪ್ರಮಾಣದ ಚಿನ್ನವನ್ನು ಕೊಲಂಬಿಯಾದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸ್ಪ್ಯಾನಿಷ್ ಯುದ್ಧದ ಸಮಯದಲ್ಲಿ ಮುಳುಗಿದ ಎರಡು ಹಡಗುಗಳನ್ನು ಅಧಿಕಾರಿಗಳು ಗುರುತಿಸಿದ್ದು, ಹಡಗಿನಲ್ಲಿದ್ದ ಚಿನ್ನ ಪ್ರಸ್ತುತ ಸಮುದ್ರದ ತಳದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Colombian

1708 ಲಾಸ್ ಏಂಜಲೀಸ್ ಕದನದಲ್ಲಿ ಬ್ರಿಟಿಷ್ ಹಡಗುಗಳ ದಾಳಿಯಿಂದಾಗಿ ಸ್ಯಾನ್ ಜೋಸ್ ಹಡಗು ಸಮುದ್ರದಲ್ಲಿ ಮುಳುಗಿತು. ಆ ಹಡಗಿನಲ್ಲಿ ಸುಮಾರು 600 ಜನ, ಚಿನ್ನದ ನಾಣ್ಯಗಳು, ಆಭರಣಗಳು ಮತ್ತು ಬಂಗಾರದ ಇತರೆ ವಸ್ತುಗಳಿದ್ದು ಎಲ್ಲವೂ ಸಮುದ್ರದ ಪಾಲಾದವು. 2015 ರಲ್ಲಿ ಕೊಲಂಬಿಯಾದ ಅಧಿಕಾರಿಗಳು ರಿಮೋಟ್ ಕಂಟ್ರೋಲ್ ವಾಹನದ ಮೂಲಕ ಹಡಗಿನ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಈ ಎರಡು ಹಡಗುಗಳು 200 ವರ್ಷಗಳಷ್ಟು ಹಳೆಯವು ಎಂದು ವಾಷಿಂಗ್ಟನ್ ವರದಿ ಮಾಡಿದೆ.

Colambia

ಇದಕ್ಕೆ ಸಂಬಂಧಿಸಿದಂತೆ ಕೆಲ ಚಿತ್ರಗಳನ್ನಿ ಬಿಡುಗಡೆ ಮಾಡಿದ್ದು, ಸಮುದ್ರದ ತಳದಲ್ಲಿ ಅಲ್ಲಲ್ಲಿ ಚಿನ್ನದ ನಾಣ್ಯಗಳು, ಮಡಿಕೆಗಳು ಮತ್ತು ಪಿಂಗಾಣಿ ಲೋಟಗಳನ್ನು ಪತ್ತೆ ಮಾಡಿದರು. ಸಮುದ್ರದ ತಳದಲ್ಲಿ ವಿವಿಧ ರೀತಿಯ ಮಣ್ಣಿನ ಮಡಕೆಗಳು ಮತ್ತು ಫಿರಂಗಿಗಳು ಕಂಡುಬಂದಿವೆ. ಶಾಸನಗಳ ಆಧಾರದ ಮೇಲೆ ಅವುಗಳ ಮೂಲವನ್ನು ಹುಡುಕಲು  ನೌಕಾ ಮತ್ತು ಸರ್ಕಾರಿ ಪುರಾತತ್ವಶಾಸ್ತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಕೊಲಂಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳನ್ನು ಹೊರತೆಗೆದು ಸ್ಯಾನ್ ಜೋಸ್ ಗ್ಯಾಲಿಯನ್ ಪರಂಪರೆಯನ್ನು ಸಂರಕ್ಷಿಸುವುದಾಗಿ ಅಧ್ಯಕ್ಷ ಇವಾನ್ ಡ್ಯೂಕ್  ಹೇಳಿದ್ದಾರೆ.

Colambia (1)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!