ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮುಂದಿನ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ನಿರ್ದೇಶನದಲ್ಲಿ ಮಹೇಶ್ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣಕ್ಕೆ ರೆಡಿಯಾಗಿರುವುದು ಈಗಾಗಲೇ ಗೊತ್ತೇ ಇದೆ.
ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಈ ಮೂರನೇ ಸಿನಿಮಾ ಯಾವ ರೀತಿಯ ಕಥೆಯಲ್ಲಿ ಬರಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಇಂಡಸ್ಟ್ರಿ ವಲಯದಲ್ಲಿ ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಈಗಾಗಲೇ ಸ್ಟಾರ್ ಬ್ಯೂಟಿ ಪೂಜಾ ಹೆಗಡೆಯನ್ನು ನಾಯಕಿಯಾಗಿ ಫಿಕ್ಸ್ ಮಾಡಿರುವ ತ್ರಿವಿಕ್ರಮ್, ಈ ಸಿನಿಮಾದ ಕಥೆಗಾಗಿ ಇಬ್ಬರು ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರಂತೆ.
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ತಮಿಳು ನಟ ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ. ಅವರಿಬ್ಬರಿಗೂ ತ್ರಿವಿಕ್ರಮ್ ಕಥೆ ಹೇಳಿದ್ದಾರಂತೆ ಎಂಬುದು ಸಿನಿ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಉಪೇಂದ್ರ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದು, ಪಾತ್ರ ತುಂಬಾ ಪವರ್ ಫುಲ್ ಆಗಲಿದೆಯಂತೆ. ಈಗಾಗಲೇ ತೆಲುಗಿನ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ವಿಲನ್ ಕ್ಯಾರೆಕ್ಟರ್‌ನಿಂದ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿರುವ ಉಪ್ಪಿ ಪ್ರಿನ್ಸ್ ಜೊತೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.