Wednesday, September 27, 2023

Latest Posts

SHOCKING| ಸೂಯೆಜ್ ಕಾಲುವೆಯಲ್ಲಿ ಎರಡು ಹಡಗು ಟ್ಯಾಂಕರ್‌ಗಳ ನಡುವೆ ಡಿಕ್ಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ಟ್ಯಾಂಕರ್‌ ಹಡಗುಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಈಜಿಪ್ಟ್‌ನ ಸೂಯೆಜ್ ಕಾಲುವೆಯಲ್ಲಿ ನಡೆದಿದೆ. ಶಿಪ್ ಟ್ರ್ಯಾಕಿಂಗ್ ಕಂಪನಿ ಮರೈನ್ ಟ್ರಾಫಿಕ್ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಸಿಂಗಾಪುರ ಧ್ವಜವಿರುವ BW ಲೆಸ್ಮೆಸ್ ಮತ್ತು ಕೇಮನ್ ದ್ವೀಪಗಳ ಧ್ವಜದ ಬರ್ರಿ ಬುಧವಾರ ಮುಂಜಾನೆ ಸೂಯೆಜ್ ಕಾಲುವೆಯಲ್ಲಿ ಡಿಕ್ಕಿ ಹೊಡೆದವು.

ಘಟನೆಯಲ್ಲಿ ಉಂಟಾದ ನಷ್ಟದ ಬಗ್ಗೆ ಯಾವುದೇ ವರದಿಗಳಿಲ್ಲ. ಎರಡು ತೈಲ ಟ್ಯಾಂಕರ್‌ ಹಡಗುಗಳ ನಡುವೆ ಡಿಕ್ಕಿಗೆ ಕಾರಣವನ್ನೂ ಸೂಯೆಜ್ ಕಾಲುವೆ ಪ್ರಾಧಿಕಾರ ಇದುವರೆಗೂ ದೃಢಪಡಿಸಿಲ್ಲ.

ಪ್ರಪಂಚದ ಸುಮಾರು 12 ಪ್ರತಿಶತ ವ್ಯಾಪಾರವು ಸೂಯೆಜ್ ಕಾಲುವೆಯ ಮೂಲಕ ನಡೆಯುತ್ತದೆ. 2021 ರಲ್ಲಿ, ಎವರ್ ಗಿವನ್ ಎಂಬ ಬೃಹತ್ ಕಂಟೇನರ್ ಹಡಗು ಸುಯೆಜ್ ಕಾಲುವೆಯಲ್ಲಿ ಬಲವಾದ ಗಾಳಿಯಿಂದಾಗಿ ಸಿಲುಕಿಕೊಂಡಿತ್ತು. ಇದರಿಂದ ಆರೇಳು ದಿನಗಳ ಕಾಲ ಎರಡೂ ಕಡೆ ಸಂಚಾರ ಸ್ಥಗಿತಗೊಂಡು, ಇದು ವಿಶ್ವ ವ್ಯಾಪಾರಕ್ಕೆ ಅಡ್ಡಿಯಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!