ಪಶ್ಚಿಮ ಬಂಗಾಳದಲ್ಲಿ ನಿಲ್ಲದ ಹಿಂಸಾಚಾರ; ಇಬ್ಬರು ಟಿಎಂಸಿ ಮುಖಂಡರ ಹತ್ಯೆಗೆ ಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಶ್ಚಿಮ ಬಂಗಾಳದ ಬಿರ್ಭೂಮ್​​ನಲ್ಲಿ ನಡೆಯುತ್ತಿರುವ ಹಿಂಸಾಚಾರ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ.
ಟಿಎಂಸಿ ಮುಖಂಡ ಭಡು ಶೇಕ್‌ ಹತ್ಯೆಗೆ ಪ್ರತಿಕಾರವಾಗಿ ಭುಗಿಲೆದ್ದ ಹಿಂಸಾಚಾರದಲ್ಲಿ 12ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟು ಮತ್ತು ಇಬ್ಬರು ಮಕ್ಕಳು ಸೇರಿ 8 ಮಂದಿಯನ್ನು ಈ ಬೆನ್ನಲ್ಲೇ ಹಿಂಸಾಚಾರ ಮುಂದುವರೆದಿದ್ದು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಟಿಎಂಸಿ ನಾಯಕರ ಹತ್ಯೆಗೆ ಯತ್ನಗಳು ನಡೆದಿದೆ.
ನಾದಿಯಾ ಪ್ರದೇಶದಲ್ಲಿ ಟಿಎಂಸಿ ಮುಖಂಡನೊಬ್ಬನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿನಡೆಸಿದ್ದಾರೆ. ಸ್ಥಳೀಯ ಟಿಎಂಸಿ ಮುಖಂಡ ಸಹದೇವ್​ ಮಂಡಲ್​ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಗುಂಡೇಟಿನಿಂದ ಗಾಯಗೊಂಡು ಬಿದ್ದಿದ್ದ ಸಹದೇವ್​​ರನ್ನು ಸ್ಥಳೀಯರು ಕೃಷ್ಣನಗರದಲ್ಲಿರುವ ಶಕ್ತಿ ನಗರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಟಿಎಂಸಿ ನಾಯಕಿ ಹಾಗೂ ಹೂಗ್ಲಿಯ ತಾರಕೇಶ್ವರದ ನೂತನ ಕೌನ್ಸಿಲರ್​ ಆದ ರೂಪಾ ಸರ್ಕಾರ್​​ ಅವರ ಮೇಲೆ ದಾಳಿಯತ್ನ ನಡೆದಿದೆ. ಬುಧವಾರ ಮಧ್ಯರಾತ್ರಿ ರೂಪಾ ಮನೆಗೆ ಮರಳುತ್ತಿದ್ದಾಗ ಅವರ ಸ್ಕೂಟರ್‌ ನ ಹಿಂಬದಿಗೆ ಮಾರುತಿ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ದುಷ್ಕರ್ಮಿಗಳು ಅವರ ಹತ್ಯೆಗೆ ಯತ್ನಿಸಿದ್ದಾರೆ. ರೂಪಾ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಗಳು ತಮ್ಮ ಹತ್ಯೆಗೆ ಯತ್ನಿಸಿದ್ದಾರೆ ಎಂದು ರೂಪಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!