ದುರ್ಗಾದೇವಿಯ ವಿಗ್ರಹ ವಿರೂಪಗೊಳಿಸಿದ ಇಬ್ಬರು ಮಹಿಳೆಯರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುರ್ಗಾದೇವಿಯ ವಿಗ್ರಹ ವಿರೂಪಗೊಳಿಸಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನ ಖೈರತಾಬಾದ್ ಪ್ರದೇಶದ ದುರ್ಗಾ ಮಂಟಪಕ್ಕೆ ನುಗ್ಗಿದ ಮಹಿಳೆಯರು ಸ್ಕ್ಯಾನರ್‌ನಿಂದ ವಿಗ್ರಹದ ಮೇಲೆ ದಾಳಿ ಮಾಡಿದ್ದಾರೆ. ಇದನ್ನು ತಡೆಯಲು ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ.
ದುರ್ಗಾ ದೇವಿಯ ಪಕ್ಕದಲ್ಲಿ ಇಡಲಾಗಿದ್ದ ಸಿಂಹವನ್ನು ವಿರೂಪಗೊಳಿಸಿದ್ದಾರೆ.

ಈ ಬಗ್ಗೆ ಡಿಸಿಪಿ ರಾಜೇಶ್ ಚಂದ್ರ ಮಾತನಾಡಿದ್ದು, ಏಕಾಏಕಿ ಇಬ್ಬರು ಮಹಿಳೆಯರು ನುಗ್ಗಿ ವಿಗ್ರಹ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯರು ತಡೆದಿದ್ದಾರೆ. ಇದೀಗ ಅವರಿಬ್ಬರು ಮಾನಸಿಕ ಅಸ್ವಸ್ಥರು ಎನ್ನಲಾಗಿದೆ. ವೈದ್ಯಕೀಯ ಸಲಹೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!