VIRAL VIDEO| ಮತ್ತೆ ಸುದ್ದಿಯಾದ ದೆಹಲಿ ಮೆಟ್ರೋ: ಯುವತಿಯರ ಫೈಟಿಂಗ್‌ ನೀವೇ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮೆಟ್ರೋ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತದೆ. ಇದೀಗ ಮೆಟ್ರೋದಲ್ಲಿ ಇಬ್ಬರು ಯುವತಿಯರು ಹೊಡೆದಾಡಿಕೊಂಡಿದ್ದಾರೆ. ಕಾರಣಾಂತರಗಳಿಂದ ಒಬ್ಬ ಯುವತಿ ಮತ್ತೊಬ್ಬ ಯುವತಿಗೆ ಶೂ ತೋರಿಸಿ ಬೆದರಿಸಿದ್ದಕ್ಕೆ ಕೈಯಲ್ಲಿದ್ದ ನೀರಿನ ಫ್ಲಾಸ್ಕ್ ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಳೆ.

ಸಹ ಪ್ರಯಾಣಿಕರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಇಬ್ಬರೂ ಜಗಳ ಮುಂದುವರಿಸಿದರು. ಗಲಾಟೆ ನಡುವೆ ಮಹಿಳೆಯೊಬ್ಬರು ಆಂತರಿಕ ಸಂಪರ್ಕ ವ್ಯವಸ್ಥೆಯ ಮೂಲಕ ರೈಲು ಚಾಲಕನಿಗೆ ತಮ್ಮ ಸಮಸ್ಯೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಟ್ವಿಟರ್ ಬಳಕೆದಾರರಾದ ಹಸ್ನಾ ಜರೂರಿ ಹಾ ಅವರು ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ. ‘ದೆಹಲಿ ಮೆಟ್ರೋದಲ್ಲಿ ಫುಲ್ ಎಂಟರ್ ಟೈನ್ ಮೆಂಟ್ ಇದೆ’ ಎಂಬ ಕಮೆಂಟ್‌ಗಳು ಬರುತ್ತಿವೆ. ಮೆಟ್ರೋ ಅಧಿಕಾರಿಗಳು ಯಾವಾಗ ಮೆಟ್ರೋದಲ್ಲಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುತ್ತಾರೋ ಗೊತ್ತಿಲ್ಲ, ಆದರೆ ಅಲ್ಲಿಯವರೆಗೂ ಇಂತಹ ಸಿನಿಮಾಗಳನ್ನು ನೋಡಲೇ ಬೇಕು ಎಂದು ಜನ ದೂರುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!