Friday, March 24, 2023

Latest Posts

ಜೀವಜಲದಿಂದ ಜೀವಕ್ಕೆ ಕುತ್ತು, ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುರು ಮಠಕಲ್ ತಾಲೂಕಿನ ಆನಪುರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಸಾವಿತ್ರಮ್ಮ ವೆಂಕಟಪ್ಪ ಹಾಗೂ ಸಾಯಮ್ಮ ಭೀಮಶಪ್ಪ ಮಿನಾಸ ಪುರಂ ಮೃತರು.

ಕಲುಷಿತ ನೀರು ಕುಡಿದ 15 ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ. ನೀರು ಕುಡಿದವರಿಗೆ ವಾಂತಿ, ಬೇಧಿ ಹೆಚ್ಚಾಗಿ ಅಸ್ವಸ್ಥಗೊಂಡಿದ್ದರು, ಸಾವಿತ್ರಮ್ಮ ಹಾಗೂ ಸಾಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಲುಷಿತ ನೀರಿನಿಂದಲೇ ಮಹಿಳೆಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗ್ರಾಮದ ಕರೆಮ್ಮ ದೇಗುಲದ ಓಣಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಾಗಿ ನೀರು ಕಲುಷಿತ ಆಗಿರಬಹುದು ಎನ್ನುವ ಶಂಕೆ ಇದೆ, ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!