ಅಮೆರಿಕ: ತಂದೆಗೆ ಗುಂಡಿಕ್ಕಿ ಕೊಂದ ಎರಡು ವರ್ಷದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಎರಡು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ತನ್ನ ತಂದೆಯ ಮೆಲೆಯೇ ಗುಂಡುಹಾರಿಸಿ ಕೊಂದ ದುರಂತ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರೆಗ್ಗಿ ಮಾಬ್ರಿ (26) ಎಂದು ಗುರುತಿಸಲಾಗಿದೆ. ಮೂವರು ಪುಟ್ಟ ಮಕ್ಕಳೊಂದಿಗೆ ಮೇರಿ ಅಯಾಲಾ- ಮಾಬ್ರಿ ದಂಪತಿ ವಾಸಿಸುತ್ತಿದ್ದರು.
ಮಾಬ್ರಿ ‌ಮನೆಯ ನೆಲದ ಮೇಲೆ ತನ್ನ ಬ್ಯಾಗ್ ಇರಿಸಿ ಕಂಪ್ಯೂಟರ್‌ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಆತ ಕೆಳಗೆ ಇರಿಸಿದ್ದ ಬ್ಯಾಗ್‌ ನಲ್ಲಿ ಗುಂಡು ತುಂಬಿಸಿಟ್ಟಿದ್ದ ಬಂದೂಕು ಇತ್ತು. ಈ ವೇಳೆ ಕುತೂಹಲದಿಂದ ಅಲ್ಲಿಗೆ ಬಂದ ಬಾಲಕ ಬಂದೂಕನ್ನು ಹಿಡಿದು ಆಟವಾಡತೊಡಗಿದ್ದಾನೆ. ಪುತ್ರನ ಆಟವನ್ನು ಮಾಂಬ್ರಿ ಗಮನಿಸಿರಲಿಲ್ಲ. ಈ ವೇಳೆ ಆಕಸ್ಮಿಕವಾಗಿ ಅದರಿಂದ ಹಾರಿದ ಗುಂಡು ತಂದೆಗೆ ತಗುಲಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಾಂಬ್ರಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯ ವೇಳೆ ಐದು ತಿಂಗಳ ಹೆಣ್ಣು ಮಗು ಸೇರಿದಂತೆ ಐವರು ಕುಟುಂಬ ಸದಸ್ಯರು ಒಂದೇ ಕೋಣೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಪ್ರಾರಂಭದಲ್ಲಿ ರೆಗ್ಗಿ ಮಾಬ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಂಬಲಾಗಿತ್ತು. ಆ ಬಳಿಕ ತನಿಖೆ ವೇಳೆ ಎರಡು ವರ್ಷದ ಬಾಲಕ ಗುಂಡು ಹಾರಿಸಿರುವ ವಿಚಾರ ತಿಳಿದುಬಂತು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!