ಎರಡು ವರ್ಷ ಮೊದಲೇ 30ನೇ ಸಿನಿಮಾ ಘೋಷಿಸಿದ ಜ್ಯೂ. ಎನ್.ಟಿ.ಆರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗುತ್ತಿದ್ದಾರೆ.ಅದೇನೆಂದರೆ ಎರಡು ವರ್ಷ ಮೊದಲೇ ತಮ್ಮ 30ನೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಸದ್ಯ ಹೊಸ ಸಿನಿಮಾದ ಶೂಟಿಂಗ್ ಇನ್ನೂ ಶುರುವಾಗಿಲ್ಲ, ಚಿತ್ರಕ್ಕೆ ಟೈಟಲ್ ಕೂಡ ಇಟ್ಟಿಲ್ಲ. ಆದ್ರೂ ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭ ಮಾಡುವುದಾಗಿ ಅಷ್ಟೇ ಹೇಳಿದ್ದಾರೆ.

ಆ ಸಿನಿಮಾವನ್ನು 5 ಏಪ್ರಿಲ್ 2024ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಪಕ್ಕಾ ತಯಾರಿ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ನಲ್ಲಿ ತೊಡಗುವುದರಿಂದ ಅಂದುಕೊಂಡ ದಿನಾಂಕದಂದೇ ಆ ಸಿನಿಮಾವನ್ನು ರಿಲೀಸ್ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.
ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ವಿ ಜ್ಯೂನಿಯರ್ ನಟನೆಯ 30ನೇ ಸಿನಿಮಾ ಕೂಡ ಪಕ್ಕಾ ಮಾಸ್ ಎಂಟರ್ ಟೈನರ್ ಎಂದು ಹೇಳಲಾಗುತ್ತಿದೆ.

ಈ ಸಿನಿಮಾ ಮುಗಿಸುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಮತ್ತೊಂದು ಸಿನಿಮಾಗೆ ತಯಾರಿ ಮಾಡಿಕೊಳ್ಳಬೇಕಿದೆ. ಈ ಸಿನಿಮಾವನ್ನು ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಅಲ್ಲದೇ, ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಕೂಡ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಫ್ಯಾಂಟಸಿ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಕುರಿತು ಅಷ್ಟೇನೂ ಮಾಹಿತಿಯನ್ನು ಜ್ಯೂನಿಯರ್ ಇನ್ನೂ ಹಂಚಿಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!