Thursday, February 2, 2023

Latest Posts

ಬೆಳ್ಳಿಪರದೆ, ಓಟಿಟಿ ಆಯಿತು ಇನ್ನು ಕಿರುತೆರೆಯಲ್ಲಿ ಅಬ್ಬರಿಸಲು ಮುಂದಾಗಿದೆ ಕಾಂತಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲೇ ಸದ್ದು ಮಾಡಿ ಎಲ್ಲರ ಮನ ಸೆಳೆದ ಸಿನಿಮಾ ಕಾಂತಾರ. ಈಗಾಗಲೇ ಬೆಳ್ಳಿಪರದೆಯಲ್ಲಿ ಕಮಾಲ್ ಮಾಡಿ ಬಳಿಕ ಓಟಿಟಿ ಯಲ್ಲೂ ಸದ್ದು ಮಾಡಿದ್ದೂ, ಇದೀಗ ಕಿರುತೆರೆಯಲ್ಲಿ ಅಬ್ಬರಿಸಲು ಮುಂದಾಗಿದೆ.

ಟಿವಿ ಪರದೆಯಲ್ಲಿ ಮಿಂಚಲು ದಿನಗಣನೆ ಶುರುವಾಗಿದೆ. ಶತದಿನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಬಗ್ಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

`ಕಾಂತಾರ’ ಸಿನಿಮಾವು ದೇಶದೆಲ್ಲೆಡೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ತುಳುನಾಡಿನ ದೈವಾರಾಧನೆಯ ಬಗ್ಗೆ ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಸೂಪರ್ ಹಿಟ್ ಸಿನಿಮಾ `ಕಾಂತಾರ’ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಈಗಾಗಲೇ `ಕಾಂತಾರ’ ಸಿನಿಮಾದ ಟೀಸರ್ ಪ್ರಸಾರವಾಗುತ್ತಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ `ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆದರೆ ಈ ಸಿನಿಮಾ ಯಾವ ದಿನ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನ ವಾಹಿನಿ ಹಂಚಿಕೊಂಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!