ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ 3 ದಿನ ಅತ್ಯಾಚಾರ, ಇಬ್ಬರು ಅಂದರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೂಲ್‌ಡ್ರಿಂಕ್‌ನಲ್ಲಿ ಮತ್ತು ಬರುವ ಔಷಧಿ ಕೊಟ್ಟು, ಯುವತಿ ಮೇಲೆ ಮೂರು ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವ ದಾರುಣ ಘಟನೆ ನೆರೆ ರಾಜ್ಯ ತೆಲಂಗಾಣ ಸೂರ್ಯಪೇಟ ಜಿಲ್ಲೆಯ ಕೊಡದ ಎಂಬಲ್ಲಿ ನಡೆದಿದೆ. ಇಬ್ಬರು ಯುವಕರು ಮೃಗಗಳಂತೆ ಯುವತಿ ಮೇಲೆ ಮೂರು ದಿನಗಳಿಂದ ಅತ್ಯಾಚಾರ ನಡೆಸಿದ್ದಾರೆ ಎಂಬ ವಿಚಾರ ತಿಳಿದು ಸಂತ್ರಸ್ತೆ ಕುಟುಂಬಸ್ತರು ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಕೌನ್ಸಿಲರ್ ಮಗ ಎಂದು ಪೊಲೀಸರು ಗುರುತಿಸಿದ್ದಾರೆ.

ಸಂತ್ರಸ್ತೆ ಹೂವಿನ ವ್ಯಾಪಾರ ಮಾಡುತ್ತಿದ್ದು, ಮೂರು ದಿನಗಳ ಹಿಂದೆ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ, ಮತ್ತು ಬರುವ ಔಷಧ ಬೆರೆಸಿದ ಕೂಲ್ ಡ್ರಿಂಕ್ ನಲ್ಲಿ ಕೊಟ್ಟು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ. ಮೂರು ದಿನಗಳ ಬಳಿಕ ಮನೆಗೆ ಬಂದ ಮಗಳ ಮೈಮೇಲಿನ ಗಾಯಗಳನ್ನು ಕಂಡು ಪೋಷಕರು ಪ್ರಶ್ನಿಸಿದ್ದಾರೆ. ನಡೆದ ಎಲ್ಲಾ ವಿಚಾರವನ್ನು ತಿಳಿಸಿದ ಬಳಿಕ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಕೌನ್ಸಿಲರ್ ಪುತ್ರನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ರಾಜಿ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋ ಕೇಳಿಬಂದಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಹಾಗೂ ಸಂತ್ರಸ್ತೆಯ ಸಂಬಂಧಿಕರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!