ವಾಟೆಹುಳಿ ಫಾಲ್ಸ್ ನಲ್ಲಿ ಮುಳುಗಿ ಇಬ್ಬರು ಯುವಕರು ನಾಪತ್ತೆ

ಹೊಸದಿಗಂತ ವರದಿ, ಸಿದ್ದಾಪುರ:

ತಾಲೂಕಿನ ನಿಲ್ಕುಂದ ಪಂಚಾಯತ ವ್ಯಾಪ್ತಿಯ ನಿಲ್ಕುಂದ ಗ್ರಾಮದ ವಾಟೆಹುಳಿ ಫಾಲ್ಸ್ ನೋಡಲು ಶಿರಸಿಯಿಂದ ಆರು ಜನ ಪ್ರವಾಸಿಗರು ಬಂದಿದ್ದು ಅವರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾಗಿ ತಿಳಿದುಬಂದಿದೆ.

ಶುಕ್ರವಾರ ಸಂಜೆ ೫ ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಶಿರಸಿಯ ಅಕ್ಷಯ ಪರಮೇಶ್ವರ ಭಟ್ಟ (22) ಹಾಗೂ ಶಿರಸಿ ಮರಾಠಿಕೊಪ್ಪದ ಸುಹಾಸ ಶೆಟ್ಟಿ(22) ಕಾಣೆಯಾದ ಯುವಕರೆಂದು ಹೇಳಲಾಗಿದೆ.

ಘಟನೆಯ ವಿಷಯ ತಿಳಿದ ಶಿರಸಿಯ ಡಿವೈಎಸ್ಪಿ, ಸಿದ್ದಾಪುರ ಠಾಣೆಯ ಸಿಪಿಐ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!