ಹೊಸದಿಗಂತ ಡಿಜಿಟಲ್ ಡೆಸ್ಕ್;
ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಅಧ್ಯಕ್ಷ ವಿಜಯ್ ಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜಕಾರಣಿಗಳಿಗೆ ನೀಡುವ ‘ವೈ’ ವರ್ಗದಡಿಯಲ್ಲಿ ಭದ್ರತೆ ಒದಗಿಸಲಾಗಿದೆ.
ವಿಜಯ್ ಕಳೆದ ವರ್ಷ ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಪ್ರಾರಂಭಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಚುನಾವಣೆಗೆ ಮುಂಚಿತವಾಗಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ. ಈ ವಿಚಾರವನ್ನು ವಿಜಯ್ ಪಕ್ಷದ ಕೇಂದ್ರ ಕಚೇರಿಯೂ ದೃಢಪಡಿಸಿದೆ.
ಗೃಹ ಸಚಿವಾಲಯದ ಆದೇಶದಂತೆ, 8ರಿಂದ 11 ಸಶಸ್ತ್ರ ಸಿಆರ್ಪಿಎಫ್ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳನ್ನೊಳಗೊಂಡ ತಂಡ ವಿಜಯ್‌ಗೆ ತಮಿಳುನಾಡು ರಾಜ್ಯದ ಮಿತಿಯೊಳಗೆ ರಕ್ಷಣೆ ನೀಡಲಿದೆ.