ಜಪಾನ್‌ಗೆ ಟೈಫೂನ್‌ ಸಂಕಷ್ಟ: ಲಕ್ಷಾಂತರ ಜನರ ಸ್ಥಳಾಂತರ, ಸಾರಿಗೆ-ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ನೈಋತ್ಯ ಜಪಾನ್‌ಗೆ ಸಮೀಪಿಸುತ್ತಿರುವ ಪ್ರಬಲ ಟೈಫೂನ್ ಚಂಡಮಾರುತ ನನ್ಮದೋಲ್‌ನ ವ್ಯಾಪಕ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಲಿದೆ.
ನೈಋತ್ಯ ಜಪಾನ್‌ನ ಕಾಗೋಶಿಮಾ ಪ್ರಿಫೆಕ್ಚರ್‌ನಲ್ಲಿ ಬಲವಾದ ಗಾಳಿ, ಎತ್ತರದ ಅಲೆಗಳು ಮತ್ತು ಚಂಡಮಾರುತದ ಉಲ್ಬಣಗಳಿಗಾಗಿ ಹವಾಮಾನ ಅಧಿಕಾರಿಗಳು ತುರ್ತು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಎನ್‌ಎಚ್‌ಕೆ ವರದಿ ಮಾಡಿದೆ.

ಗಂಟೆಗೆ 180 ಕಿಲೋಮೀಟರ್‌ ವೇಗದಲ್ಲಿ ಬೀಸುತ್ತಿರುವ ಗಾಳಿಯು ಉತ್ತರ ಮತ್ತು ದಕ್ಷಿಣ ಕ್ಯುಶು ಮತ್ತು ಅಮಾಮಿ ದ್ವೀಪಗಳಿಗೆ ತಲುಪುವಷ್ಟರಲ್ಲಿ ಗಂಟೆಗೆ 252 ಕಿಲೋಮೀಟರ್‌ಗಳನ್ನು ತಲುಪುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸೋಮವಾರ ಬೆಳಗ್ಗೆವರೆಗೂ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕ್ಯುಶುನಲ್ಲಿ 600 ಮಿಲಿಮೀಟರ್‌ಗಳಷ್ಟು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ನೈಋತ್ಯ ಜಪಾನ್‌ನಲ್ಲಿ ಸುಮಾರು ಎರಡು ಮಿಲಿಯನ್ ಜನರನ್ನು ಭಾನುವಾರದಂದು ಟೈಫೂನ್ ಮುನ್ಸೂಚನೆಗೆ ಮುಂಚಿತವಾಗಿ ಸ್ಥಳಾಂತರಿಸಲು ಆದೇಶಿಸಲಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ, ಜಪಾನ್ ಏರ್‌ಲೈನ್ಸ್ ಮತ್ತು ಆಲ್ ನಿಪ್ಪಾನ್ ಏರ್‌ವೇಸ್ 500 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಬುಲೆಟ್ ರೈಲು ಸಂಚಾರಕ್ಕೂ ತೊಂದರೆಯಾಗಿದ್ದು, ಮಧ್ಯಾಹ್ನ 1:30 ರ ವೇಳೆಗೆ ಕ್ಯುಶು ಶಿಂಕನ್‌ಸೆನ್‌ನ ನಿರ್ವಾಹಕರು ಭಾನುವಾರ ಮತ್ತು ಸೋಮವಾರದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಸಮುದ್ರತೀರದ ನಗರಗಳಾದ ಮಿಯಾಝಾಕಿ, ಕಾಗೋಶಿಮಾ ಮತ್ತು ಅಮಕುಸಾದಿಂದ 9,65,000 ಮನೆಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಅಗತ್ಯವಿದ್ದರೆ ತುರ್ತು ಪರೊಸ್ಥಿತಿ ಘೋಷಿಸಲಾಗುವುದು ಎಂದು ಜಪಾನ್‌ನ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!