ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಪಕ್ಕದ ಮನೆಗೆ ನುಗ್ಗಿದ ಪ್ರತಿಷ್ಠಿತ ಕಂಪನಿಯೊಂದರ ಸಿಎಫ್‌ಒ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕುಡಿದ ಮತ್ತಿನಲ್ಲಿದ್ದ ಪ್ರಮುಖ ಕಂಪನಿಯ ಸಿಎಫ್‌ಒನನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕದ ಆಹಾರ ಕ್ಷೇತ್ರದಲ್ಲಿ ಖ್ಯಾತರಾಗಿರುವ ಟೈಸನ್ ಫುಡ್ಸ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜಾನ್ ಟೈಸನ್ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಕುಡಿದ ಮತ್ತಿನಲ್ಲಿ ಅವರ ಮನೆಗೆ ಹೋಗದೆ ಪಕ್ಕದ ಮನೆಯಲ್ಲಿ ವಾಸವಿದ್ದ ಯುವತಿಯ ಮನೆಗೆ ತೆರಳಿ, ಅರೆಬೆತ್ತಲೆಯಾಗಿ ಮಂಚದ ಮೇಲೆ ಮಲಗಿದನು. ಅದೃಷ್ಟವಶಾತ್ ಜಾನ್ ಟೈಸನ್ ಹೋದಾಗ ಯುವತಿ ಮನೆಯಲ್ಲಿ ಇರಲಿಲ್ಲ. ಬೆಳಿಗ್ಗೆ ಬಂದಾಗ ಹಾಸಿಗೆಯ ಮೇಲಿದ್ದ ವ್ಯಕ್ತಿಯನ್ನು ಕಂಡು ಗಾಬರಿಯಿಂದ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಯುವತಿಯ ಮನೆಗೆ ತಲುಪಿದ ಪೊಲೀಸರು ಆತನ ಡ್ರೈವಿಂಗ್ ಲೈಸೆನ್ಸ್ ಆಧಾರದ ಮೇಲೆ ಪ್ರಸಿದ್ಧ ಕಂಪನಿಯ ಸಿಎಫ್‌ಒ ಜಾನ್ ಟೈಸನ್ ಎಂದು ಗುರುತಿಸಿದ್ದಾರೆ. ಅತನನ್ನು ಎಬ್ಬಿಸುವ ಪ್ರಯತ್ನಗಳು ವಿಫಲವಾದ ಬಳಿಕ ಪ್ರಕರಣ ದಾಖಲಿಸಿಕೊಂಡು ವಾಷಿಂಗ್ಟನ್ ಕೌಂಟಿಯ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಜಾನ್ ಟೈಸನ್ ಬೇರಾ ಯಾರೋ ಅಲ್ಲ, ಟೈಸನ್ ಫುಡ್ಸ್ ಅಧ್ಯಕ್ಷ ಜಾನ್ ಹೆಚ್.ಟೈಸನ್ ಅವರ ಮಗ. ಕೊನೆಗೆ 415ಡಾಲರ್ ಬಾಂಡ್‌ ಪಡೆದು ಟೈಸನ್ ಅನ್ನು ಪೊಲೀಸರು ಬಿಡುಗಡೆ ಮಾಡಿದರು. ಡಿಸೆಂಬರ್ 1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!