ಉಕ್ರೇನ್-ರಷ್ಯಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಪೊಲೆಂಡ್‌ ಗೆ ಬಂದ 1700 ಯುಎಸ್‌ ಸೈನಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಗಡಿಯಲ್ಲಿ ರಷ್ಯಾ ಭಾರೀ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದ್ದು, ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗುವ ಭೀತಿ ಎದುರಾಗಿದೆ.
ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡುವ ಭೀತಿಯಿಂದ ಈಗಾಗಲೇ ಅಮೆರಿಕ 8500 ಸೈನಿಕರನ್ನು ಸಜ್ಜುಗೊಳಿಸಿದೆ. ಈ ಪೈಕಿ 1700 ಸೈನಿಕರು ಉಕ್ರೇನ್‌ ಗಡಿಯ ಆಗ್ನೇಯ ಪೊಲೆಂಡ್‌ ಗೆ ಬಂದಿಳಿದಿದ್ದಾರೆ.
ಯುಎಸ್‌ ಆರ್ಮಿ ಬೋಯಿಂಗ್‌ ಸಿ-17 ಗ್ಲೋಬ್‌ ಮಾಸ್ಟರ್‌ ವಿಮಾನದಲ್ಲಿ 1700 ಅಮೆರಿಕ ಸೈನಿಕರು ರ್ಜೆಸ್ಜೋವ್‌ ಜಸಿಯೋಂಕಾ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.
ಈ ವೇಳೆ ನ್ಯಾಟೋ ಕೂಡ ಪೊಲೇಂಡ್‌, ರೊಮೇನಿಯಾ ಮತ್ತು ಜರ್ಮನಿಗಳಿಗೆ ಹೆಚ್ಚುವರಿ ಅಮೆರಿಕ ಸೇನಾಪಡೆಯನ್ನು ನಿಯೋಜಿಸಲು ಸೂಚಿಸಿದೆ. ಉಕ್ರೇನ್‌ ಸುತ್ತ ಈಗಾಗಲೇ ರಷ್ಯಾ ಒಂದು ಲಕ್ಷ ಸೈನಿಕರನ್ನು ನಿಯೋಜಿಸಿದೆ. ರಷ್ಯಾ ನಡೆಯ ಬಗ್ಗೆ ಭೀತಿ ಹೆಚ್ಚಾಗಿರುವ ಹಿನ್ನೆಲೆ ಅಮೆರಿಕ ಹಾಗೂ ನ್ಯಾಟೋ ತನ್ನ ಸೇನಾ ಚಟುವಟಿಕೆಗಳನ್ನು ಚುರುಕುಗೊಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!