Sunday, March 26, 2023

Latest Posts

ದೇವೇಂದ್ರ ಫಡ್ನವಿಸ್ ಬಂಧನಕ್ಕೆ ಪ್ಲಾನ್ ಮಾಡಿದ ಉದ್ಧವ್ ಠಾಕ್ರೆ: ರಹಸ್ಯ ಮಾಹಿತಿ ಬಿಚ್ಚಿಟ್ಟ ‘ಮಹಾ’ಸಿಎಂ ಶಿಂಧೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಧವ್ ಠಾಕ್ರೆ ಸರ್ಕಾರವು, ಅಂದಿನ ಪ್ರತಿಪಕ್ಷ ನಾಯಕರಾಗಿದ್ದ ಹಾಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಬಂಧಿಸಲು ಮುಂದಾಗಿತ್ತು ಎಂದು ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ.

ಮಹಾರಾಷ್ಟ್ರ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ ಶಿಂಧೆ ಅವರು, ಅಂದಿನ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಗಿರೀಶ್ ಮಹಾಜನ್ ಅವರನ್ನು ಬಂಧಿಸಲು ಎಂವಿಎ ಸರ್ಕಾರದಿಂದ ನಡೆಯುತ್ತಿದ್ದ ಪ್ಲ್ಯಾನ್‌ಗೆ ನಾನು ಸಾಕ್ಷಿಯಾಗಿದ್ದೇನೆ. ಆ ಸರ್ಕಾರವು ಮಹಾಜನ್ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ 1999 ಜಾರಿಗೊಳಿಸಲು ಯೋಜಿಸಿತ್ತು ಎಂದು ಶಿಂಧೆ ಹೇಳಿದರು.

ದೇವೇಂದ್ರ ಫಡ್ನವಿಸ್, ಮಹಾಜನ್ ಬಂಧನಗಳ ಮೂಲಕ ಭಾರತೀಯ ಜನತಾ ಪಾರ್ಟಿ ಹಿನ್ನಡೆಗೆ ಹೋಗುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ, ನಾನು ಅವರ ನಿರ್ಧಾರವನ್ನು ಬದಲಿಸುವ ಬದಲಿಗೆ ಇಡೀ ಸರ್ಕಾರವನ್ನು ಬೀಳಿಸಿದೆ ಮತ್ತು ಮನೆಯಲ್ಲಿ ಕೂಡಿಸುವ ಹಾಗೆ ಮಾಡಿದೆ ಎಂದು ಶಿಂಧೆ ಹೇಳಿದ್ದಾರೆ.

ಇದೀಗ ಈ ಸಂಚಿನಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳದಂತೆ ನಾನು ಸೂಚಿಸಿದ್ದೇನೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದೇ ಸಾಕು. ಈ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂಬುದು ನನಗೆ ಸಂಪೂರ್ಣ ಮಾಹಿತಿ ಇದೆ. ಒಂದು ವೇಳೆ, ಅಗತ್ಯ ಬಿದ್ದರೆ ಈ ಕುರಿತು ತನಿಖೆ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಶಿಂಧೆ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!