Wednesday, November 30, 2022

Latest Posts

ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ: ವಿವಿಧ ಕ್ಷೇತ್ರಗಳ 36 ಸಾಧಕರ ಆಯ್ಕೆ

ಹೊಸದಿಗಂತ ವರದಿ,ಉಡುಪಿ:

2022ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 36 ಸಾಧಕರನ್ನು ಆಯ್ಕೆ ಮಾಡಿ ಜಿಲ್ಲಾಡಳಿತ ಪಟ್ಟಿ ಬಿಡುಗಡೆಗೊಳಿಸಿದೆ.

ಕಾರ್ಕಳ ತಾಲೂಕಿನ ಲೋಕು ಪೂಜಾರಿ (ದೈವಾರಾಧನೆ), ಕುಂದಾಪುರ ತಾಲೂಕಿನ ನಾಗರಾಜ ಪಾಣ (ದೈವಾರಾಧನೆ), ಬೈಂದೂರುತಾಲೂಕಿನ ರಾಮಯ್ಯ ಬಳೆಗಾರ (ಯಕ್ಷಗಾನ), ಕಾಪು ತಾಲೂಕಿನ ಗಿರೀಶ್ ಪಲಿಮಾರು (ಯಕ್ಷಗಾನ/ ರಂಗಭೂಮಿ), ಬ್ರಹ್ಮಾವರ ತಾಲೂಕಿನ ಮನು ಹಂದಾಡಿ (ರಂಗಭೂಮಿ), ಕಾಪು ತಾಲೂಕಿನ ರಾಜ ಕಟಪಾಡಿ (ರಂಗಭೂಮಿ), ಬೈಂದೂರು ಸುರೇಂದ್ರ ಮೊಗವೀರ (ಯಕ್ಷಗಾನ), ಬ್ರಹ್ಮಾವರ ಜಾನಕಿ ಹಂದೆ( ಕೃಷಿ/ ಹೈನುಗಾರಿಕೆ), ಕಾರ್ಕಳದ ಬಾಬು ಕೆ.(ಸಾಹಿತ್ಯ), ಉಡುಪಿ ಕೆ ಮಂಜಪ್ಪ ಸುವರ್ಣ ಪೂಜಾರಿ (ಸಂಗೀತ), ಉಡುಪಿಯ ಸುಚಿತಾ ಪೈ(ಸಂಗೀತ), ಉಡುಪಿ ನಾರಾಯಣ ಬಿಳಿರಾಯ(ಪಾಕತಜ್ಞರು), ಕಾಪು ವೆಂಕಟೇಶ್ ದೇವಾಡಿಗ (ಪಾಕತಜ್ಞರು), ಕಾಪು ಎ. ರಾಮಚಂದ್ರ ಆಚಾರ್ಯ( ಮಾಧ್ಯಮ), ಕಾಪು ಮಹೇಶ ಮರ್ಣೆ (ಕಲೆ), ಕಾರ್ಕಳದ ಗಣೇಶ ನಾಯಕ್‌ ಎಣ್ಣೆಹೊಳೆ (ಕಲೆ), ಉಡುಪಿ “ಪ್ರೋ ಕನರಾಡಿ ವಾದಿರಾಜ ಭಟ್ (ಸಂಕೀರ್ಣ), ಉಡುಪಿಯ ಕಮಲಮ್ಮ ದೊಡ್ಡಣಗುಡ್ಡೆ(ಗೋಸಾಕಣೆ /ಕೃಷಿ), ಉಡುಪಿ ಡಾ. ಉಷಾ ಚಡಗ (ಸಂಕೀರ್ಣ), ಉಡುಪಿ ದಯಾನಂದ ಶೆಟ್ಟಿ (ಸಂಕೀರ್ಣ), ಕಾರ್ಕಳದ ಕೆ. ಸುಬ್ರಹ್ಮಣ್ಯ ಆಚಾರ್ಯ (ಜನಪದ), ಕಾಪು ಹರೀಶ್ ಕುಮಾರ್‌ (ಜನಪದ), ಉಡುಪಿ ಈಶ್ವರ ಮಲ್ಪೆ (ಸಮಾಜ ಸೇವೆ), ಕಾರ್ಕಳ ಟಿ. ರಾಮಚಂದ್ರ ನಾಯಕ್‌ (ಸಮಾಜ ಸೇವೆ), ಹೆಬ್ರಿ ಐತು ಕುಲಾಲ್ (ಸಮಾಜ ಸೇವೆ), ಕುಂದಾಪುರದ ಮಹಿಮಾ(ಬಾಲ ಪ್ರತಿಭೆ), ಉಡುಪಿ ಅಭಿನ್ ದೇವಾಡಿಗ (ಕ್ರೀಡೆ), ಉಡುಪಿ ಟೀಮ್ ನೇಷನ್‌ ಫಸ್ಟ್ (ಸಂಘ ಸಂಸ್ಥೆ), ಕಾರ್ಕಳ ಶ್ರೀ ಶಾರದ ಪೂಜಾ ಸಮಿತಿ (ಸಂಘ ಸಂಸ್ಥೆ), ಕುಂದಾಪುರ ‍ ಯಾಕುಬ್‌ ಗುಲ್ವಾಡಿ (ಸಾಹಿತ್ಯ), ಕಾರ್ಕಳ ಡಾ.ಸುನಿಲ್‌ ಮುಂಡ್ಕೂರು (ವೈದ್ಯಕೀಯ ಕ್ಷೇತ್ರ), ಉಡುಪಿ ಜೂಲಿಯನ್‌ ದಾಂತಿ (ಕೃಷಿ), ಕಾಪು ನೀಲಾಧರ ಶೇರಿಗಾರ (ಸಂಗೀತ), ಉಡುಪಿ ಸುಲತಾ ಕಾಮತ್‌ (ಕ್ರೀಡೆ), ಉಡುಪಿ ಅರುಣಕಲಾ ಎಸ್. ರಾವ್ (ಕ್ರೀಡೆ) ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!