ಉಡುಪಿಯ ಹಿಜಾಬ್‌ ವಿವಾದ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿಯ ಹಿಜಾಬ್‌ ವಿವಾದ ರಾಜ್ಯ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಾಮಿಸಿದ್ದು, ಈ ವಿವಾದದ ತನಿಖೆಗೆ ಸಮಿತಿ ರಚಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ‘ಶಿಕ್ಷಣ ಸಂಸ್ಥೆ ಪವಿತ್ರ ಸ್ಥಳವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾನ ಎಂದು ಭಾವಿಸಬೇಕು. ಇದನ್ನು ಎರಡು ಸಮುದಾಯಗಳ ಯುದ್ಧ ಕ್ಷೇತ್ರವಾಗುವುದನ್ನು ನಾವು ನೋಡಲು ಬಯಸೋದಿಲ್ಲ. ಹಾಗಾಗಿ ಸಂಸ್ಥೆಗಳ ಆವರಣದಲ್ಲಿ ಈ ರೀತಿ ಮಾಡಬಾರದು ಎಂದು ನಾವು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ’ ಎಂದರು.
ಈ ಸಮಸ್ಯೆ ಕೇವಲ 20 ದಿನಗಳ ಹಿಂದೆ ಪ್ರಾರಂಭವಾಗಿದೆ. ಈ ಹಿಂದೆ ಯಾರು ಹಿಜಾಬ್ ಧರಿಸಿ ಬರುತ್ತಿರಲಿಲ್ಲ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಅಂತಿಮ ವರದಿಯನ್ನು ನೀಡುವ ಸಮಿತಿಯನ್ನು ನಾವು ರಚಿಸುತ್ತೇವೆ. ಈ ಬಗ್ಗೆ ಸರಕಾರ ದೃಢವಾದ ನಿಲುವು ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!