ಹೊಸದಿಗಂತ ವರದಿ, ಮಂಗಳೂರು:
ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿರುವ ಮಲ್ಪೆ ನೇಜಾರಿನ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಕುರಿತು ಮತ್ತಷ್ಟು ಮಾಹಿತಿಗಳು ಬಹಿರಂಗವಾಗುತ್ತಿದ್ದು, ಕೃತ್ಯ ನಡೆಸಲು ಆತ ಆಗಮಿಸಿದ್ದ ರಿಕ್ಷಾದ ಚಾಲಕ ಹಂತಕನ ಚಹರೆ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೋಳು ತಲೆ ಹೊಂದಿದ್ದ ಆತ, ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದ. ಆತನ ಕೈಯಲ್ಲಿ ಬ್ಯಾಗ್ ಕೂಡ ಇತ್ತು. ಆತನನ್ನು ಇಳಿಸಿದ ಕೇವಲ ೧೫ ನಿಮಿಷಗಳಲ್ಲಿ ಆತ ಮತ್ತೆ ವಾಪಸ್ ಅಟೋದ ಬಳಿ ಬಂದಿದ್ದ. ಆತ ಇನ್ನೊಂದು ಆಟೋವನ್ನು ತೆಗೆದುಕೊಂಡು ಬೇಗ ಹೊರಡಲು ಒತ್ತಾಯಿಸಿದ್ದ. ಎರಡನೇ ಆಟೋ ಡ್ರೈವರ್ ಆತನನ್ನು ಕರಾವಳಿ ಬೈಪಾಸ್‌ನಲ್ಲಿ ಡ್ರಾಪ್ ಮಾಡಿದ್ದಾರೆ. ಬೆಂಗಳೂರು ಶೈಲಿಯ ಕನ್ನಡದಲ್ಲಿ ಹಂತಕ ಮಾತನಾಡುತ್ತಿದ್ದ ಎಂಬ ಅಂಶಗಳು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಲಭ್ಯವಾಗಿದೆ.