FESTIVAL | ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಂದೂ ಧರ್ಮದ ಬಹುದೊಡ್ಡ ಹಬ್ಬವಾದ ಯುಗಾದಿಯನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

ಪ್ರತೀ ಮನೆಯ ಮುಂದೆಯೂ ತಳಿರು ತೋರಣ, ಬಣ್ಣದ ಹೂವುಗಳು, ರಂಗೋಲಿ ಕಾಣಿಸುತ್ತದೆ. ಎಣ್ಣೆ ಸ್ನಾನ, ಹೊಸ ಬಟ್ಟೆ, ಭರ್ಜರಿ ಭೋಜನ ಹೀಗೆ ಹಬ್ಬದ ಕಳೆಯೇ ಬೇರೆ..

ಆದರೆ ಈ ಹಬ್ಬದಂದು ಚಂದ್ರನನ್ನು ಯಾಕೆ ಹುಡುಕಿ ನೋಡುತ್ತಾರೆ ಗೊತ್ತಾ?. ಈ ಬಗ್ಗೆ ಒಂದು ಕಥೆಯೇ ಇದೆ.

ಯಾಕೆ ನೋಡಬೇಕು?

ಇದೇ ದಿನದಂದು ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿರುತ್ತಾನೆ. ಆದರೆ ಆಯತಪ್ಪಿ ಕೆಳಗೆ ಬೀಳುತ್ತಾನೆ. ಇದನ್ನು ಯಾರೂ ನೋಡಿಲ್ಲ ಎಂದುಕೊಳ್ಳುತ್ತಾನೆ. ಆದರೆ ಮೇಲಿದ್ದ ಚಂದ್ರನು ಜೋರಾಗಿ ನಗುತ್ತಾನೆ.

ಚಂದ್ರ ನಕ್ಕಿದ್ದು ನೋಡಿ ಗಣೇಶನಿಗೆ ಕೋಪ ಬರುತ್ತದೆ. ಹಾಗಾಗಿ ಚೌತಿಯ ದಿನ ಗಣೇಶನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪ ನೀಡುತ್ತಾನೆ. ಈ ಶಾಪ ವಿಮೋಚನೆಗಾಗಿ ಪ್ರತಿಯೊಬ್ಬರು ಇಂದು ಚಂದ್ರನನ್ನು ಹುಡುಕಿ ಹುಡುಕಿ ನೋಡುತ್ತಾರೆ. ಅಮವಾಸ್ಯೆಯ ನಂತರ ಸಣ್ಣ ಉಗುರಿನಂತೆ ಚಂದ್ರ ಕಾಣುತ್ತಾನೆ. ಆದರೂ ಬಿಡದೆ ಜನರು ಚಂದ್ರನ ದರ್ಶನ ಮಾಡಿ ದೊಡ್ಡವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!