ಸೀಬರ್ಡ್ ನಿರಾಶ್ರಿತರಿಗೆ ಯುಗಾದಿ ಸಿಹಿ! 10.47ಕೋಟಿ ರೂ. ಪರಿಹಾರ ಮಂಜೂರು: ಕಾಗೇರಿ

ಹೊಸದಿಗಂತ ವರದಿ, ಕಾರವಾರ :

ಸೀಬರ್ಡ್ ನಿರಾಶ್ರಿತರಿಗೆ ಯುಗಾದಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು 2008-09 ರಿಂದ ಬಾಕಿ ಉಳಿದಿದ್ದ 28/A ಕೇಸ್ ನ 10.47 ಕೋಟಿ ರೂಗಳ ಪರಿಹಾರ ಮಂಜೂರು ಮಾಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸೀಬರ್ಡ್ ಯೋಜನೆ ಅಡಿಯಲ್ಲಿ ಸೇನಾ ನೆಲೆ ನಿರ್ಮಾಣಕ್ಕಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು .ಈ ಸ್ಥಳಾಂತರಕ್ಕೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು ಇದರಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದವು. ಈ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದು ಅದನ್ನು ಸಂಸದನಾಗಿ ಆಯ್ಕೆ ಆದ ಮೇಲೆ ಈ ಕುರಿತು ತಕ್ಷಣ ನೌಕಾ ನೆಲೆ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತು ಸ್ಥಳೀಯರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಕೇಂದ್ರ ರಕ್ಷಣಾ ಮಂತ್ರಿಗಳ ಗಮನಕ್ಕೆ ತಂದು, ನಿರಂತರ ಪ್ರಯತ್ನದಿಂದ 57 ಪ್ರಕರಣಗಳಿಗೆ ಪರಿಹಾರ ದೊರಕಿದೆ ಎಂದು ತಿಳಿಸಿದ್ದಾರೆ.

ಅಮದಳ್ಳಿ, ಕೊಡಾರ್, ಹಟ್ಟಿಕೇರಿ, ಬಿಣಗಾ, ಚೆಂಡಿಯಾ, ಬಿರಾಡೆ ಈ ಗ್ರಾಮಗಳ ಕೆಲವು ನಿರಾಶ್ರಿತರ ಪ್ರಕರಣಗಳು ಅನೇಕ ವರ್ಷಗಳಿಂದ ಪರಿಹಾರಕ್ಕಾಗಿ ನಿರಂತರವಾಗಿ ಸರ್ಕಾರದ ಬಾಗಿಲು ತಟ್ಟುತ್ತಾ ಬಂದಿದ್ದವು. ಕೇಂದ್ರ ಸರಕಾರದ ಈ ಆದೇಶದಿಂದ ಈಗ 10.47 ಕೋಟಿ ರೂ. ಈ ಪರಿಹಾರ ನಿಧಿಯ ಮಂಜೂರಾತಿಯಿಂದ ಸಂಕಷ್ಟದಲ್ಲಿದ್ದ ಕುಟುಂಬಗಳು ದೀರ್ಘಕಾಲದ ನಿರೀಕ್ಷೆಯಿಂದ ಮುಕ್ತಿಗೊಳ್ಳಲಿದೆ.

ಕೆಲವೇ ದಿನಗಳಲ್ಲಿ ಈ 57 ಪ್ರಕರಣಗಳಿಗೆ ಪರಿಹಾರ ಅವರ ಖಾತೆಗಳಿಗೆ ಜಮಾ ಆಗಲಿದೆ, ಉಳಿದ ಪ್ರಕರಣಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಆದೇಶಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ,ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರನ್ನು, ಮತ್ತು ಜಿಲ್ಲಾಡಳಿತ, ಕೇಂದ್ರ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!