Thursday, March 30, 2023

Latest Posts

ಯುಗಾದಿ ಉತ್ಸವ: ರಾಷ್ಟ್ರೀಯ ಸ್ವಯಂ ಸೇವಕರಿಂದ ಪಥ ಸಂಚಲನ

ಹೊಸದಿಗಂತ ವರದಿ, ಮುಂಡಗೋಡ:

ಯುಗಾದಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂ-ಸೇವಕ ಸಂಘದವರು ಗಣವೇಷ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿಭಾನುವಾರ ಪಥ ಸಂಚಲನ ನಡೆಸಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಘೋಷ ವಾದ್ಯಗಳೊಂದಿಗೆ ಸಾಗಿದ ಪಥ ಸಂಚಲನದ ಮಾರ್ಗದಲ್ಲಿ ಮನೆಗಳ ಮುಂದೆ ಸಾರ್ವಜನಿಕರು ನೀರು ಎರಚಿ ರಂಗೋಲಿ ಬಿಡಿಸಿ ಗಣವೇಷಧಾರಿಗಳಿಗೆ ಸ್ವಾಗತ ಕೋರಿದರು. ಜಿಲ್ಲೆಯ ಪ್ರಮುಖರು ಮತ್ತು ತಾಲೂಕಿನ ಸ್ವಯಂ-ಸೇವಕರು ಪಾಲ್ಗೊಂಡಿದ್ದ ಪಥ ಸಂಚಲನ ನೋಡುಗರ ಗಮನ ಸೆಳೆಯಿತು. ನಂತರ ಕೊನೆಯಲ್ಲಿ ಪಥ ಸಂಚಲನ ಸಭಾ ಕಾರ್ಯಕ್ರಮ ನಡೆಯುವ ತಾಲೂಕು ಕ್ರೀಡಾಂಗಣ ಸೇರಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!