ಕನಸೊಂದು ನನಸಾಯ್ತು: ತೆಲುಗಿನತ್ತ ಮುಖಮಾಡಿದ ಬಾಲಿವುಡ್‌ ನಟಿ ಜಾಹ್ನವಿ ಕಪೂರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನಟಿ ಜಾಹ್ನವಿ ಕಪೂರ್​ (Jahnavi Kapoor) ಇದೀಗ ಸೌತ್​ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಮೂಲಕ ತೆಲುಗಿನತ್ತ ಮುಖಮಾಡಿದ್ದಾರೆ.

ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India) ಹೀರೋ ಎನ್​ಟಿಆರ್​ 30 ಚಿತ್ರಗೆ ಜಾಹ್ನವಿ ಕಪೂರ್ ಅವರು ಹೀರೋಯಿನ್​ ಆಗಿ ಆಯ್ಕೆ ಆಗಿದ್ದಾರೆ.ಅವರ ಫಸ್ಟ್​ ಲುಕ್​ ಪೋಸ್ಟರ್​ ಈಚೆಗೆಬಿಡುಗಡೆ ಆಗಿತ್ತು. ಆ ಮೂಲಕ ಅಭಿಮಾನಿಗಳಿಗೆ ಜಾಹ್ನವಿ ಕಪೂರ್​ ಖುಷಿ ಸುದ್ದಿ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ವಾರಸ್ಯಕರವಾದ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಚಿತ್ರವು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಸದ್ಯ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.

ಜಾಹ್ನವಿ ಕಪೂರ್​ ವೃತ್ತಿಜೀವನದಲ್ಲಿ ಇದು ಬಹುದೊಡ್ಡ ಸಿನಿಮಾ ಆಗಲಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಹಲವು ತಿಂಗಳ ಕಾಲ ಮಾತುಕಥೆ ನಡೆದು, ಅಂತಿಮವಾಗಿ ಜಾಹ್ನವಿ ಕಪೂರ್​ ಅವರಿಗೆ ಅವಕಾಶ ನೀಡಲಾಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಲಿದೆ. ಆ ಕಾರಣಕ್ಕಾಗಿ ಬಾಲಿವುಡ್​ ನಟಿಗೆ ಮಣೆ ಹಾಕಲಾಗಿದೆ. ಈಗಾಗಲೇ ನಿರ್ದೇಶಕ ಕೊರಟಾಲ ಶಿವ ತಮಗೆ ಹಲವು ಬಾರಿ ಮೆಸೇಜ್ ಮಾಡಿದ್ದು, ಪೂರ್ವಸಿದ್ಧತಾ ಚಿತ್ರೀಕರಣಕ್ಕೆ ರೆಫರೆನ್ಸ್ ಕೇಳುತ್ತಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.

ಎನ್​ಟಿಆರ್​ ಜೊತೆಗಿನ ತಮ್ಮ ಸಿನಿಮಾದ ಬಗ್ಗೆ ಬಹಳ ಉತ್ಸುಕರಾಗಿರುವ ನಟಿ, ಸಿನಿಮಾ ಶೂಟಿಂಗ್‌ಗಾಗಿ ದಿನಗಳನ್ನು ಎಣಿಸುತ್ತಿದ್ದೇನೆ. ಎನ್‌ಟಿಆರ್ ಜೊತೆ ಕೆಲಸ ಮಾಡುವ ಅವಕಾಶಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತಿದ್ದೆ ಎಂದು ರಿವೀಲ್​ ಮಾಡಿದ್ದಾರೆ. ಎನ್‌ಟಿಆರ್ ಜೊತೆ ಕೆಲಸ ಮಾಡುವ ಕನಸು ನನಸಾಗಲಿದೆ. ಅವರ RRR ಚಿತ್ರ ನೋಡಿದೆ. ಅವರ ಅಭಿನಯವನ್ನು ನೋಡಿ ಅಚ್ಚರಿಗೊಂಡೆ ಎಂದು ಜಾಹ್ನವಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!