ಉಜ್ಜಯಿನಿ ಅತ್ಯಾಚಾರ ಪ್ರಕರಣ: ಆರೋಪಿಯ ಮನೆ ಧ್ವಂಸ ಮಾಡಿದ ಮಧ್ಯಪ್ರದೇಶ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಜ್ಜಯಿನಿ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಭರತ್ ಸೋನಿಗೆ ಸೇರಿದ ಅಕ್ರಮವಾಗಿ ನಿರ್ಮಿಸಿದ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಧವಾರ ಬುಲ್ಡೋಜರ್ ಬಳಸಿ ದ್ವoಸ ಮಾಡಿದೆ.

ಉಜ್ಜಯಿನಿಯ ನನಖೇಡ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ಅಧಿಕಾರಿಗಳು ಬುಧವಾರ ತೆರವು ಮಾಡಿದ್ದಾರೆ.

ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕನಾಗಿದ್ದ ಭರತ್ ಸೋನಿ ಎಂಬಾತನನ್ನು ಕಳೆದ ವಾರ ಬಂಧಿಸಲಾಗಿದೆ.

12 ವರ್ಷದ ಬಾಲಕಿಯನ್ನು ಭರತ್‌ ಸೋನಿ ಅತ್ಯಾಚಾರ ಮಾಡಿದ್ದ. ಅಪ್ರಾಪ್ತ ಬಾಲಕಿ ತಾನು ಹೋಗುವ ದಾರಿಯುದ್ಧಕ್ಕೂ ಸಿಕ್ಕಿದ್ದ ಮನೆಯಲ್ಲಿ ಸಹಾಯ ಬೇಡಿದ್ದಳು. ಆದರೆ, ಆಕೆಯನ್ನು ಕಂಡೊಡನೆ, ನಾಯಿ ಓಡಿಸುವ ರೀತಿಯಲ್ಲಿ ಮನೆಯ ಎದುರಿನಿಂದ ಓಡಿಸಿದ್ದರು. ಅಂದಾಜು 8 ಕಿ.ಮೀ ಹೀಗೆ ಪ್ರಯಾಣಿಸಿದ ಈಕೆಗೆ ಬಳಿಕ ದೇವಸ್ಥಾನದ ಅರ್ಚಕ ಸಹಾಯ ಮಾಡಿದ್ದನು.

ಈ ನಡುವೆ ಪೊಲೀಸರು ಭರತ್‌ ಸೋನಿ ಮಾತ್ರವಲ್ಲದೆ, ಆಕೆಗೆ ಸಹಾಯ ಮಾಡಲು ನಿರಾಕರಿಸಿದ ಮನೆಯವರ ಮೇಲೂ ಕೇಸ್‌ ಹಾಕಲು ನಿರ್ಧಾರ ಮಾಡಿದ್ದಾರೆ.

ಈಕೆ ದಾರಿಯಲ್ಲಿ ನಡೆದುಕೊಂಡು ಹೋಗಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು.ರಕ್ತ ಸೋರುತ್ತಿದ್ದ ಕಾರಣಕ್ಕೆ ಅರೆಬೆತ್ತಲೆಯಲ್ಲಿಯೇ ಆಕೆ ಮನೆ ಬಾಗಿಲಿಗೆ ಹೋಗಿದ್ದರೆ, ಸ್ಥಳೀಯರು ಕನಿಷ್ಠ ಸಹಾಯ ಮಾಡಲು ಕೂಡ ನಿರಾಕರಿಸಿದ್ದರು.

ವರದಿಗಳ ಪ್ರಕಾರ, ಮುನ್ಸಿಪಲ್ ಕಾರ್ಪೊರೇಷನ್ ನನಖೇಡಾದಲ್ಲಿ ಆಟೋ ಚಾಲಕ ಭರತ್ ಸೋನಿ ಅವರ ಮನೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ. ಈ ವೇಳೆ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಪೊಲೀಸರ ತಂಡ ಸ್ಥಳದಲ್ಲಿಯೇ ಇತ್ತು. ಶಾಂತಿಯುತವಾಗಿ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಭರತ್‌ ಸೋನಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಧಾರ್ಮಿಕ ಸ್ಥಳ ಹಾಗೂ ಮನೆ ಕಟ್ಟಿಕೊಂಡಿದ್ದರು ಎಂದು ತಿಳಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!