ಬ್ರಿಟನ್‌ ಸಂಸತ್‌ನಲ್ಲಿ ನೀಲಿಚಿತ್ರ ವೀಕ್ಷಿಸಿದ ಸಂಸದ ರಾಜೀನಾಮೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಗ್ಲೆಂಡ್‌ ಪ್ರಧಾನಮಂತ್ರಿ ಬೋರಿಸ್‌ ಜಾನ್ಸನ್‌ ಅವರ ಕನ್ಸರ್ವೇಟಿವ್ ಪಕ್ಷದ ಸಂಸತ್‌ ಸದಸ್ಯರೊಬ್ಬರು ಹೌಸ್ ಆಫ್ ಕಾಮನ್ಸ್‌ನಲ್ಲಿ (ಸಂಸತ್‌) ಶನಿವಾರ ತನ್ನ ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ವಿಚಾರ ವಿವಾದದ ಬಿರುಗಾಳಿ ಎಬ್ಬಿಸುತ್ತಿದ್ದಂತೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಸತ್ತಿನಲ್ಲಿ ತಾನು ಫೋನ್‌ ನಲ್ಲಿ ಎರಡು ಬಾರಿ ಪೋರ್ನ್‌ ವಿಡಿಯೋ ನೋಡಿದ್ದಾಗಿ ಸಂಸದ ನೀಲ್ ಪ್ಯಾರಿಶ್ ಒಪ್ಪಿಕೊಂಡ ಬಳಿಕ ಕನ್ಸರ್ವೇಟಿವ್ ಪಕ್ಷ ಅವರನ್ನು ಉಚ್ಛಾಟನೆ ಮಾಡಿದೆ.
ಶನಿವಾರ ಸಂಸತ್‌ ಅಧಿವೇಶನದಲ್ಲಿ ಭಾಗಿಯಾಗಿದ್ದ ನೀಲ್ ಪ್ಯಾರಿಶ್ ತಮ್ಮ ಪಕ್ಕ ಕುಳಿತು ಪದೇ ಪದೆ ಬ್ಲೂ ಫಿಲ್ಮ್‌ ವೀಕ್ಷಿಸುತ್ತಿದ್ದುದ್ದನ್ನು ತಾನು ನೋಡಿದ್ದೇನೆ ಎಂದು ಮಹಿಳಾ ಸಂಸದೆಯೊಬ್ಬರು ದೂರಿದ್ದರು.
ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿ ಸಂಬಂಧಿಸಿ ಫೋನ್‌ ನಲ್ಲಿ ಸರ್ಚ್‌ ಮಾಡುತ್ತಿದ್ದೆ, ಅದೇ ವೇಳೆ ಪೋರ್ನ್‌ ವೆಬ್‌ ಸೈಟ್‌ ಆಕಸ್ಮಿಕವಾಗಿ ಓಪನ್‌ ಆಯ್ತು. ಅದನ್ನು ಸ್ವಲ್ಪ ಹೊತ್ತು ವೀಕ್ಷಿಸಿದೆ. ಆನಂತರ ಹುಚ್ಚು ಆವೇಶ ತಡೆಯಲಾರದೆ ಪುನಃ ವೆಬ್‌ ಸೈಟ್‌ ಗೆ ಹೋಗಿ ಎರಡನೇ ಬಾರಿ ವೀಕ್ಷಿಸಿದೆ. ಅದೇ ನನಗೆ ಮುಳುವಾಯ್ತು. ನಾನು ಮಾಡಿದ ಕೆಲಸದ ಬಗ್ಗೆ ನನಗೆ ವಿಶಾದವಿದೆ. ನನ್ನ ವರ್ತನೆಯಿಂದ ನನ್ನ ಕುಟುಂಬ ಹಾಗೂ ನಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ಅಪಮಾನಿಸಿದ ಭಾವನೆ ಉಂಟಾಗುತ್ತಿದೆ. ಆದ್ದರಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪ್ಯಾರಿಶ್‌ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!