Friday, July 1, 2022

Latest Posts

ಕಿರಿಕ್‌ ಬೆಡಗಿಯ ಊಟದ ಮೆನು ನಿಮಗೆ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ. ಇದೀಗ ವಿಜಯಗಳ ಸರಮಾಲೆಯೊಂದಿಗೆ ನ್ಯಾಷನಲ್ ಕ್ರಶ್ ಆಗಿದ್ದಾರೆ. ತನ್ನ ಮುದ್ದಾದ ನೋಟ, ನಗು ಮತ್ತು ಸೌಂದರ್ಯದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ.

ಸೆಲಬ್ರೆಟಿ ಅಂದ ಮೇಲೆ ಅವರ ಊಟೋಪಚಾರ ಸೇರಿದಂತೆ ಕೆಲ ವಿಚಾರಗಳನ್ನು ತಿಳಿದುಕೊಳ್ಳುವ ತವಕದಲ್ಲಿರುತ್ತಾರೆ, ಇದೀಗ ರಶ್ಮಿಕಾ ಮಂದಣ್ಣ ದಿನನಿತ್ಯ ಯಾವ್ಯಾವ ಆಹಾರ ಸೇವಿಸುತ್ತಾರೆ. ಎಂಬುದನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಬೆಳಿಗ್ಗೆ ಎದ್ದ ಕೂಡಲೇ ರಶ್ಮಿಕಾ ಮೊದಲು ಕುಡಿದದ್ದು ಕೋಲ್ಡ್ ಕಾಫಿ. ನಂತರ ಊಟಕ್ಕೆ ಮೊದಲು ಸೆಲರಿ ಜ್ಯೂಸ್ ಕುಡಿದು. ಮಧ್ಯಾಹ್ನ ಬಾದಾಮಿ, ಓಟ್ಸ್ ಮೀಲ್ ಅನ್ನು ಬೆಣ್ಣೆಯೊಂದಿಗೆ ಸವಿದಿದ್ದಾರೆ. ಸಂಜೆ ಟೀ, ರಾತ್ರಿ ಚಿಕನ್‌ ಹಾಗೂ ಬೇಯಿಸಿದ ಆಲೂಗಡ್ಡೆ ನನ್ನ ಫುಡ್‌ ಎಂದಿದ್ದಾರೆ ರಶ್ಮಿಕಾ. ಅವರ ಡಯೆಟ್‌ ಫುಡ್‌ನ ವಿಡಿಯೋ ಇದೀಗ ವೈರಲ್‌ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss