ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನಲ್ಲಿ ಗಂಡು-ಹೆಣ್ಣು ಮದುವೆಯಾಗುವುದು ಸರ್ವೆ ಸಾಮಾನ್ಯ. ದೋಷ ಇದೆ ಅಂತ ಮರ, ಗಿಡ, ಪ್ರತಿಮೆಗಳಿಗೆ ಮದುವೆ ಮಾಡಿಸುವುದು ಶಾಸ್ತ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಪ್ರಾಣಿ, ಪಕ್ಷಿಗಳೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.
ಲಂಡನ್ನ 49 ವರ್ಷದ ಡೆಬೋರಾ ಹಾಡ್ಜ್ ಎಂಬ ಮಹಿಳೆ ಬೆಕ್ಕನ್ನು ವಿವಾಹವಾಗಿದ್ದಾರೆ. ಕಾರಣ ಇಷ್ಟೇ ಮನೆಯ ಮಾಲೀಕರೊಬ್ಬರು ಸಾಕು ಪ್ರಾಣಿಗಳಿದ್ದರೆ, ಮನೆ ಬಾಡಿಗೆಗೆ ಕೊಡುವುದಿಲ್ಲ ಎಂದಿದ್ದಕ್ಕೆ ಬೆಕ್ಕನ್ನು ಮದುವೆಯಾಗಿ ಇದೀಗ ಸಾಕು ಪ್ರಾಣಿಯಲ್ಲ ನನ್ನ ಸಂಗಾತಿ ಅಂದಿದ್ದಾರೆ.
ಭಾರತ ಎಂದು ಬೆಕ್ಕಿಗೆ ನಾಮಕರಣ ಮಾಡಿ, ಅದನ್ನು ತನ್ನ ಸಂಗಾತಿಯೆಂದು ಬಿಂಬಿಸಿರುವ ವಿಚಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಮುದ್ದಾಗಿ ಸಾಕಿದ ಬೆಕ್ಕನ್ನು ಬಿಡುವ ಮನಸಾಗಿಲ್ಲ ಹಾಗಾಗಿ ಈ ನಿರ್ಧಾರ ಮಾಡಿರುವೆ ಅಂತಾರೆ ಡೆಬೋರಾ ಹಾಡ್ಜ್.