Thursday, February 9, 2023

Latest Posts

ಸೀಟ್ ಬೆಲ್ಟ್ ವಿವಾದ: ತಪ್ಪೊಪ್ಪಿ ಕ್ಷಮೆಯಾಚಿಸಿದ ಪ್ರಧಾನಿ ರಿಷಿ ಸುನಕ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೀಟ್‌ ಬೆಲ್ಟ್‌ ಧರಿಸದ ಕಾರಣಕ್ಕೆ ವಿವಾದಕ್ಕೊಳಗಾಗಿದ್ದರು. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್‌ ಬೆಲ್ಟ್‌ ಧರಿಸದೆ ವಿಡಿಯೋ ಚಿತ್ರೀಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸುನಕ್ ತಕ್ಷಣವೇ ಪ್ರತಿಕ್ರಿಯಿಸಿ ನಿಯಮಗಳನ್ನು ಉಲ್ಲಂಘಿಸಿರುವುದ್ದಕ್ಕೆ ಕ್ಷಮೆಯಾಚಿಸಿದರು. ವಾಸ್ತವವಾಗಿ ಬ್ರಿಟನ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಸರಿಯಾಗಿ ಧರಿಸಬೇಕು. ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಯನ್ನು ಹೊರತುಪಡಿಸಿ ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು. ಇಲ್ಲವಾದಲ್ಲಿ ಸ್ಥಳದಲ್ಲೇ 100 ಪೌಂಡ್ ದಂಡ ವಸೂಲಿ ಮಾಡಲು ಅವಕಾಶವಿದೆ. ನ್ಯಾಯಾಲಯಕ್ಕೆ ಹೋದಲ್ಲಿ ದಂಡ 500 ಪೌಂಡ್‌ಗಳಿಗೆ ಹೆಚ್ಚಾಗುತ್ತದೆ.

ಬ್ರಿಟನ್‌ನಾದ್ಯಂತ 100 ಕ್ಕೂ ಹೆಚ್ಚು ಯೋಜನೆಗಳಿಗೆ ಹಣ ನೀಡಲು ಹೊಸ ಲೆವೆಲಿಂಗ್ ಆಪ್ ಫಂಡ್ ಅನ್ನು ಜಾಹೀರಾತು ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಬ್ರಿಟಿಷ್ ಸರ್ಕಾರ ವಿಡಿಯೋ ಮಾಡಿದೆ. ಈ ವಿಡಿಯೋ ಚಿತ್ರೀಕರಣದಲ್ಲಿ ಪ್ರಧಾನಿ ರಿಷಿ ಸುನಕ್ ಭಾಗವಹಿಸಿದ್ದರು. ಆದಾಗ್ಯೂ, ವೀಡಿಯೊ ಚಿತ್ರೀಕರಣದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಾ ಪ್ರಧಾನಿ ಮಾತನಾಡಿದರು. ಸೀಟ್ ಬೆಲ್ಟ್ ಧರಿಸದೇ ವಿಡಿಯೋ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ವಿರೋಧ ಪಕ್ಷಗಳ ನಾಯಕರು ಸುನಕ್ ಅವರ ನಡವಳಿಕೆಯನ್ನು ಟೀಕಿಸಿದರು.

ಬ್ರಿಟಿಷರ ನಿಯಮಗಳ ಪ್ರಕಾರ ತಾನು ಮಾಡಿದ್ದು ತಪ್ಪು ಎಂದು ಅರಿತು ಸುನಕ್ ಕ್ಷಮೆ ಯಾಚಿಸಿದರು. ಈ ವಿಷಯದ ಕುರಿತು ಮಾತನಾಡಿದ ಪ್ರಧಾನ ಮಂತ್ರಿಯ ಡೌನಿಂಗ್ ಸ್ಟ್ರೀಟ್ ವಕ್ತಾರರು, ಸುನಕ್ ಅವರು ತಮ್ಮ ಸೀಟ್ ಬೆಲ್ಟ್ ಅನ್ನು ಸ್ವಲ್ಪ ಸಮಯದವರೆಗೆ ತೆಗೆದುಹಾಕಿದ್ದರು. ಬಳಿಕ ಅವರ ತಪ್ಪನ್ನು ಅರಿತು ಕ್ಷಮೆಯಾಚಿಸಿದ್ದಾರೆ. ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು ಎಂದು ಪ್ರಧಾನಿಯವರ ಆಶಯವೂ ಹೌದು ಎಂದು ಸುನಕ್ ಅವರ ವಕ್ತಾರರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!