ರಷ್ಯಾದೊಂದಿಗೆ ಶಾಂತಿ ಮಾತುಕತೆ ನಡೆಸಲು ಉಕ್ರೇನ್‌ ಒಪ್ಪಿಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ರಷ್ಯಾ ಆಕ್ರಮಣಕ್ಕೆ ತುತ್ತಾಗಿ ಇಂದಿಗೆ 5ನೇ ದಿನ. ತನ್ನ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾದೊಂದಿಗೆ ಶಾಂತಿ ಮಾತುಕತೆ ನಡೆಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಪ್ಪಿಗೆ ನೀಡಿದ್ದಾರೆ.
ಯುದ್ಧ ನಿಲ್ಲಿಸಿ ಶಾಂತಿ ಮಾತುಕತೆ ನಡೆಸಲು ಉಕ್ರೇನ್‌ ನಿರಾಕರಿಸಿದೆ ಎಂಬ ರಷ್ಯಾದ ಆರೋಪವನ್ನು ಉಕ್ರೇನ್‌ ತಳ್ಳಿ ಹಾಕಿದ್ದು, ಸ್ವೀಕಾರ್ಹವಲ್ಲದ ಷರತ್ತುಗಳನ್ನು ಹೊರತುಪಡಿಸಿ, ಶಾಂತಿ ಮಾತುಕತೆ ನಡೆಸಲು ನಾವು ಸಿದ್ಧ ಎಂದು ಘೋಷಣೆ ಮಾಡಿದೆ.
ಉಕ್ರೇನ್‌ ಚೆರ್ನೋಬಿಲ್‌ ಹೊರಗಿರುವ ಬೆಲಾರಸ್‌ ನಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಉಕ್ರೇನ್‌ ತಿಳಿಸಿದೆ.
ರಷ್ಯಾದ ದಾಳಿಯಲ್ಲಿ 352 ಮಂದಿ ಜನರು, 14 ಮಕ್ಕಳು ಬಲಿಯಾಗಿದ್ದಾರೆ. ಇನ್ನು 1,684 ಉಕ್ರೇನಿಯರು ಹಾಗೂ 116 ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ರಷ್ಯಾ ಭಾನುವಾರ ಉಕ್ರೇನ್‌ ನ ಪ್ರಮುಖ ನಗರ ಖಾರ್ಕಿವ್‌ ಪ್ರವೇಶಿಸಿದ್ದು, ಗ್ಯಾಸ್‌ ಪೈಪ್‌ ಲೇನ್‌ ಸ್ಫೋಟಿಸಿದೆ.
ಈ ನಡುವೆ ವಿಶ್ವಸಂಸ್ಥೆ ಕೂಡ ತುರ್ತು ಸಭೆ ನಡೆಸಿದ್ದು. ಅದರಲ್ಲಿನ 15 ಸದಸ್ಯ ರಾಷ್ಟ್ರಗಳ ಪೈಕಿ ಪ್ರಮುಖವಾದ ಭಾರತ, ಚೀನಾ, ಅರಬ್ ಎಮಿರೆಟ್ಸ್ ಸಂಯುಕ್ತ ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. ಉಳಿದ 11 ರಾಷ್ಟ್ರಗಳು ರಷ್ಯ ವಿರುದ್ಧ ಮತ ಹಾಕಿದ್ದು, ರಷ್ಯ ಏಕಾಂಗಿಯಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!