ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಜೊತೆ ಶಾಂತಿಯುತ ಮಾತುಕತೆಗೆ ಒಪ್ಪಿಗೆ ನೀಡಿದ್ದಾರೆ.
ತಮ್ಮ ದೇಶದ ಮೇಲೆ ಆಕ್ರಮಣ ಮಾಡುವ ವಿಷಯದಲ್ಲಿ ರಷ್ಯಾದೊಂದಿಗೆ ಬೆಲಾರಸ್ ಕೂಡ ಕೈಜೋಡಿಸಿದ್ದರಿಂದ ಉಕ್ರೇನ್ ಕೆಲ ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು. ಇದರಿಂದ ರಷ್ಯಾ ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿತ್ತು. ಈ ಮಧ್ಯೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ರಷ್ಯಾದ ಜತೆ ಪೂರ್ವಭಾವಿ ಷರತ್ತುಗಳಿಲ್ಲದೆ ಮಾತುಕತೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ.
ಉಕ್ರೇನಿಯನ್ ನಿಯೋಗವು ಪ್ರಿಪ್ಯಾಟ್ ನದಿಯ ಬಳಿ ಉಕ್ರೇನಿಯನ್-ಬೆಲರೂಸಿಯನ್ ಗಡಿಯಲ್ಲಿ ಪೂರ್ವ ಅಪೇಕ್ಷೆಗಳಿಲ್ಲದೆ ರಷ್ಯಾದ ನಿಯೋಗವನ್ನು ಭೇಟಿ ಮಾಡಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ.