ರಷ್ಯಾಕ್ಕೆ ಶಸ್ತ್ರಾಸ್ತ್ರ ಪೂರೈಸದಂತೆ ಇರಾನ್ ಗೆ ಉಕ್ರೇನ್ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸುವಂತೆ ಇರಾನ್ ವಿದೇಶಾಂಗ ಸಚಿವ ಹೊಸೇನ್ ಅಮಿರಾಬ್ಡೊಲ್ಲಾಹಿಯಾನ್ ಅವರಿಗೆ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ದೂರವಾಣಿ ಕರೆಮಾಡಿ ಒತ್ತಾಯಿಸಿದ್ದಾರೆ.
ಇರಾನ್ ರಷ್ಯಾಕ್ಕೆ ಶಸ್ತ್ರಾಸ್ತ್ರ ಹಾಗೂ ಡ್ರೋನ್‌ಗಳನ್ನು ಕಳುಹಿಸುತ್ತಿದೆ ಎಂದು ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಆರೋಪಿಸಿದ್ದವು. ಉಕ್ರೇನಿಯನ್ ನೆಲದಲ್ಲಿ ರಷ್ಯಾದ ಪಡೆಗಳು ನಡೆಸುತ್ತಿರುವ  ವಿನಾಶಕಾರಿ ದಾಳಿಯಲ್ಲಿ ಇರಾನ್‌ ಶಸ್ತ್ರಾಸ್ತ್ರ ಪೂರೈಕೆದಾರನ ಪಾತ್ರವಹಿಸಿರುವುದಾಗಿ ಆರೋಪಿಸಲಾಗಿತ್ತು. ಆದರೆ,  ಇರಾನ್ ಈ ಆರೋಪವನ್ನು ನಿರಾಕರಿಸಿದೆ.
“ನಾಗರಿಕರನ್ನು ಕೊಲ್ಲಲು ಮತ್ತು ಉಕ್ರೇನ್‌ನಲ್ಲಿನ ನಿರ್ಣಾಯಕ ಮೂಲಸೌಕರ್ಯಗಳನ್ನು ನಾಶಮಾಡಲು ಬಳಸಿದ ರಷ್ಯಾಕ್ಕೆ ಶಸ್ತ್ರಾಸ್ತ್ರಗಳ ಹರಿವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ಇರಾನ್‌ಗೆ ಒತ್ತಾಯಿಸಿದೆ” ಎಂದು ಕುಲೇಬಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧಕ್ಕಾಗಿ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ಇರಾನ್‌ನ ನಿರಾಕರಣೆಯನ್ನು ಅಮಿರಾಬ್ದೊಲ್ಲಾಹಿಯಾನ್ ಪುನರುಚ್ಚರಿಸಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!