ತಮ್ಮ ವಶದಲ್ಲಿರುವ ರಷ್ಯನ್ ಸೈನಿಕರನ್ನು ಕರೆದುಕೊಂಡು ಹೋಗುವಂತೆ ಅವರ ತಾಯಂದಿರಿಗೆ ಉಕ್ರೇನ್ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸಲು ಆರಂಭಿಸಿ ವಾರವೇ ಕಳೆದಿದೆ. ಅಂತಾರಾಷ್ಟ್ರೀಯ ಒತ್ತಡಗಳ ನಡುವೆಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕದನವಿರಾಮ ಘೋಷಿಸಿಲ್ಲ. ಈ ಮಧ್ಯೆ ಉಕ್ರೇನ್ ಕೂಡ ಹಲವಾರು ರಷ್ಯನ್ ಸೈನಿಕರನ್ನು ಸೆರೆಹಿಡಿದಿದೆ.

ಯುದ್ಧ ಸಮಯದ ಕೈದಿಗಳ ಹಾಗೆ ರಷ್ಯನ್ ಸೈನಿಕರನ್ನು ಉಕ್ರೇನ್ ಬಂಧಿಸಿದ್ದು, ಇವರ ತಾಯಂದರಿಗೆ ಯುದ್ಧಭೂಮಿಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದೆ. ಉಕ್ರೇನ್ ಸೇನೆ ಈ ಔದಾರ್ಯ ಪುಟಿನ್‌ರನ್ನು ಜಗತ್ತಿನ ದೃಷ್ಟಿಯಲ್ಲಿ ಇನ್ನಷ್ಟು ಸಣ್ಣವನಾಗುವಂತೆ ಮಾಡಿದೆ.

ನಮ್ಮ ವಶದಲ್ಲಿರುವ ರಷ್ಯನ್ ಸೈನಿಕರನ್ನು ಅವರ ತಾಯಂದಿರಿಗೆ ಹಸ್ತಾಂತರ ಮಾಡುವ ನಿರ್ಧಾರ ಮಾಡಿದ್ದೇವೆ. ಅವರ ತಾಯಂದಿರು ಇಲ್ಲಿಗೆ ಬಂದು ಅವರನ್ನು ಕರೆದುಕೊಂಡು ಹೋಗಬಹುದು ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ರಷ್ಯನ್ ಆಕ್ರಮಣ ಬೆಂಬಲಿಸುವವರ ಮನಪರಿವರ್ತನೆಗಾಗಿ ಕೀವ್ ರಷ್ಯನ್ ಪೋಷಕರಿಗೆ ಹಾಟ್‌ಲೈನ್ ಒಂದನ್ನು ಆರಂಭಿಸಿದೆ. ಇದರಲ್ಲಿ ತಮ್ಮ ಮಕ್ಕಳು ಸೆರೆವಾಸದಲ್ಲಿದ್ದಾರೋ, ಮಡಿದಿದ್ದಾರೋ ಎನ್ನುವ ಮಾಹಿತಿಯನ್ನು ಪೋಷಕರಿಗೆ ನೀಡಲಾಗುತ್ತದೆ. ಸೈನಿಕರ ಮಾಹಿತಿ ತಿಳಿಸಲು ಉಕ್ರೇನ್ ಸಚಿವಾಲಯ ಟೆಲಿಫೋನ್ ನಂಬರ್ ಹಾಗೂ ಇ-ಮೇಲ್ ವಿಳಾಸವನ್ನು ಎಲ್ಲ ಮಾಧ್ಯಮಗಳಲ್ಲಿ ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!