‘ಉಕ್ರೇನ್‌ಗೆ ಹೆಚ್ಚುವರಿ ಅನಿಲ, ಶಸ್ತ್ರಾಸ್ತ್ರಗಳ ಅಗತ್ಯವಿದೆ’: ಜಿ7 ರಾಷ್ಟ್ರಗಳಿಗೆ ಝೆಲೆನ್ಸ್ಕೀ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ದಾಳಿಯಿಂದ ಜರ್ಝರಿತವಾಗಿರುವ ಉಕ್ರೇನ್ ಗೆ ಹೆಚ್ಚಿನ‌ ಅನಿಲ ಮತ್ತು ಶಸ್ತ್ರಾಸ್ತ್ರಗಳ‌ ಅಗತ್ಯವಿದೆ ಎಂದು ಉಕ್ರೇನ್ ಅಧ್ಯಕ್ಷ‌ ವೊಲೋಡಮೀರ್ ಝೆಲೆನ್ಸ್ಕೀ ಜಿ7 ರಾಷ್ಟ್ರಗಳಿಗೆ ಮನವಿ ಮಾಡಿದ್ದು ಶಸ್ತ್ರಾಸ್ತ್ರಗಳನ್ನು‌ ನೀಡುವಂತೆ ಒತ್ತಾಯಿಸಿದ್ದಾರೆ.

ಚಳಿಗಾಲ‌ ಬರುತ್ತಿರುವುದರಿಂದ ಹಿಮ‌ ಸುರಿಯುತ್ತಿದ್ದು ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದಾರೆ. ರಷ್ಯಾವು ವಿದ್ಯುತ್ ಸ್ಥಾವರಗಳ ಮೇಲೆ‌ ದಾಳಿ ನಡೆಸಿರುವುದರಿಂದ‌ ಶೀತದಿಂದ ಕಂಗೆಟ್ಟಿದ್ದಾರೆ. ಶೀತ ವಾತಾವರಣದಲ್ಲಿ ಬದುಕುಳಿಯುವುದೂ ಕಷ್ಟವಾಗುತ್ತಿದೆ. ಹಾಗಾಗಿ ಹೆಚ್ಚುವರಿಯಾಗಿ ಎರಡು‌‌ಬಿಲಿಯನ್ ಘನ ಮೀಟರ್ ನಷ್ಟು ಅನಿಲದ ಅಗತ್ಯವಿದೆ ಎಂದು ಝೆಲೆನ್ಸ್ಕೀ‌ ಶ್ರೀಮಂತ ರಾಷ್ಟ್ರಗಳ G7 ಕ್ಲಬ್‌ನೊಂದಿಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.

“ಆಧುನಿಕ ಟ್ಯಾಂಕ್‌ಗಳು” ಮತ್ತು “ರಾಕೆಟ್ ಫಿರಂಗಿಗಳು ಮತ್ತು ಹೆಚ್ಚು ದೂರದ ಕ್ಷಿಪಣಿಗಳು” ಸೇರಿದಂತೆ ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಅವರು G7 ಅನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!