ಯುದ್ಧದಲ್ಲಿ ʻಅತ್ಯಾಚಾರʼವೂ ಒಂದು ಅಸ್ತ್ರವೇ..?, ವಿಶ್ವಸಂಸ್ಥೆ ಬಳಿ ಉಕ್ರೇನ್ ಬಹುದೊಡ್ಡ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ದೇಶದ ಮೇಲೆ ಯುದ್ಧ ಮಾಡಲು ರಷ್ಯಾ ಕೇವಲ ಶಸ್ತ್ರಾಸ್ತ್ರ, ಬಾಂಬ್‌, ಸೇನೆಯನ್ನು ಮಾತ್ರ ಬಳಸುತ್ತಿಲ್ಲ. ನಮ್ಮ ದೇಶದ ಹೆಣ್ಣುಮಕ್ಕಳ ಮೇಲೆ ʻಅತ್ಯಾಚಾರʼ ಎಂಬ ಆಯುಧವನ್ನು ಬಳಸುತ್ತಿದೆ ಎಂದು ಉಕ್ರೇನ್‌ ಮಾನವ ಹಕ್ಕುಗಳ ಆಯೋಗ ವಿಶ್ವಸಂಸ್ಥೆಗೆ ತಿಳಿಸಿದೆ.ತನ್ನ ದೇಶದ ಹೆಣ್ಣುಮಕ್ಕಳ ಮೇಲೆ ರಷ್ಯಾ ಸೇನೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ವಿಶ್ವಸಂಸ್ಥೆ ಎದರು ಉಕ್ರೇನ್ ತನ್ನ ಆಕ್ರೋಶವನ್ನು ಹೊರಹಾಕಿದೆ. ಇದು ಅತ್ಯಂತ ಭಯಾನಕ ವಿಚಾರ, ಯುದ್ಧದಲ್ಲಿ ‘ಅತ್ಯಾಚಾರ’ವೂ ಒಂದು ಅಸ್ತ್ರವೇ? ಎಂದು ಉಕ್ರೇನ್‌ ಪ್ರಶ್ನೆ ಮಾಡಿದೆ.

ಲಾ ಸ್ಟ್ರಾಡಾ-ಉಕ್ರೇನ್ ಎಂಬ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಕ್ಯಾತರಿನಾ ಚೆರೆಪಾಖಾ, ಇದುವರೆಗೂ ರಷ್ಯಾ ಸೈನಿಕರು 12 ಉಕ್ರೇನ್ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ನಮ್ಮಲ್ಲಿ ದೂರು ದಾಖಲಾಗಿವೆ ಎಂದು ವಿವರಣೆ ನೀಡಿದ್ದಾರೆ. ಇದು ಕೇವಲ ನಮಗೆ ಲಭ್ಯವಾಗಿರುವ ಮಾಹಿತಿ ಅಷ್ಟೇ, ಇದಕ್ಕೂ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ರಷ್ಯಾ ಸೇನೆಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. “ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೈನಿಕರು ಅತ್ಯಾಚಾರವನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ” ಎಂದು ವಿಡಿಯೋ ಸಂವಾದದ ಮೂಲಕ ಕ್ಯಾತರಿನಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಆದರೆ ಉಕ್ರೇನ್‌ ಹೇಳಿಕೆಯು ಸತ್ಯಕ್ಕೆ ದೂರವಾದದ್ದು ಎಂದು ರಷ್ಯಾ ಉಕ್ರೇನ್‌ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದೆ. ಉಕ್ರೇನ್‌ನಲ್ಲಿ ನಾವು ಸಾಮಾನ್ಯ ಪ್ರಜೆಗಳನ್ನು ಗುರಿಯಾಗಿಸಿಲ್ಲ, ಇದೇ ರೀತಿಯ ಆಧಾರರಹಿತ ಆರೋಪಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಮಾಡಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!