ನಮ್ಮ ಪರ ಹೋರಾಡೋಕೆ ಯಾವ ದೇಶವೂ ಇಲ್ಲ- ಅಲವತ್ತುಕೊಂಡ ಉಕ್ರೇನ್ ಅಧ್ಯಕ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ-ಉಕ್ರೇನ್ ಯುದ್ಧ ಈಗಾಗಲೇ ಆರಂಭವಾಗಿದ್ದು, ಉಕ್ರೇನ್‌ನ 137 ಮಂದಿ ಮೃತಪಟ್ಟಿದ್ದಾರೆ.
ಈ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿ ಉಳಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬೇಸರ ವ್ಯಕ್ತಪಡಿಸಿದ್ದಾರೆ.

ಯುದ್ಧ ಆರಂಭವಾದಾಗಿನಿಂದ ಉಕ್ರೇನ್‌ನ ಸೈನಿಕರು ಹಾಗೂ ನಾಗರಿಕರು ಸೇರಿದಂತೆ 137 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ,316 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯ ವಿರುದ್ಧ ಹೋರಾಡಲು ಯಾವ ದೇಶವೂ ಇಲ್ಲ ಎಂದು ಹೇಳಿದ್ದಾರೆ.

ನಾನು ಬಹಳಷ್ಟು ವಿದೇಶಿ ನಾಯಕರ ಜೊತೆ ಮಾತನಾಡಿದ್ದೇನೆ. ಎಲ್ಲರೂ ನಿಮಗೆ ಬೆಂಬಲವಿದೆ ಎಂದೇ ಹೇಳಿದ್ದಾರೆ. ಆದರೆ ನಮಗೆ ಬರೀ ಪದಗಳ ಸಹಾಯ ಸಾಲದು. ಇದನ್ನೂ ಮೀರಿ ನಮಗೆ ನಿರ್ದಿಷ್ಟವಾಗಿ ಸಹಾಯ ಮಾಡಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಆದರೆ ನಮಗಾಗಿ ಹೋರಾಡೋಕೆ ಯಾರಿದ್ದಾರೆ? ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅಂತವರು ಯಾರೂ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!