ರಷ್ಯಾದಿಂದ ಬಿಡುಗಡೆಯಾದ ಸೈನಿಕನ ಫೋಟೊ ಹಂಚಿಕೊಂಡ ಉಕ್ರೇನ್, ಇದೆಂಥಾ ಭೀಕರತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದಿಂದ ಬಂಧಿತನಾಗಿದ್ದ ಸೈನಿಕರೊಬ್ಬರ ಫೋಟೊವೊಂದನ್ನು ಉಕ್ರೇನ್ ರಕ್ಷಣಾ ಸಚಿವಾಲಯ ಹಂಚಿಕೊಂಡಿದೆ. ಹಿಂದೆ ಹೇಗಿದ್ದರು, ಈಗ ಹೇಗಾಗಿದ್ದಾರೆ ಎನ್ನುವ ಫೋಟೊ ಇದಾಗಿದ್ದು, ಒಂದೇ ಫೋಟೊದಲ್ಲಿ ಯುದ್ಧದ ಭೀಕರತೆ ಕಾಣುತ್ತಿದೆ. ಸೈನಿಕರ ಅಂಗಾಗಳು ಊನವಾದಂತೆ ಕಾಣುತ್ತಿದ್ದು, ಮುಖದ ಮೇಲೆ ಗಾಯಗಳಾಗಿವೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ತಿಂಗಳಿನಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದ್ದು, ರಷ್ಯಾದ ಸೈನಿಕರು ಉಕ್ರೇನ್‌ನಲ್ಲಿದ್ದಾರೆ ಹಾಗೂ ಉಕ್ರೇನ್ ಸೈನಿಕರು ರಷ್ಯಾ ಮುಷ್ಠಿಯಲ್ಲಿದ್ದಾರೆ. ಉಕ್ರೇನ್ ಸೈನಿಕ ಮೈಖೆಲ್ಲೋ ಡಯಾನೋವ್ ಫೋಟೊ ಇದಾಗಿದ್ದು, ರಷ್ಯಾ ಸೆರೆಗೆ ಸಿಲುಕಿ ಬಿಡುಗಡೆಯಾಗಿ ಬಂದ ನಂತರ ಇವರ ಗುರುತೇ ಸಿಗದಂತೆ ಆಗಿದೆ.

ಈ ಬಗ್ಗೆ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದ್ದು, ಮೊದಲು ಹೀಗಿದ್ದರು, ಈಗ ಹೀಗಾಗಿದ್ದಾರೆ. ರಷ್ಯಾದಿಂದ ಜೀವಂತವಾಗಿ ಬಿಡುಗಡೆ ಹೊಂದಿದ ಸೈನಿಕರಲ್ಲಿ ಮೈಖೆಲ್ಲೋ ಒಬ್ಬರಾಗಿದ್ದಾರೆ, ಆದರೆ ಇವರು ಅದೃಷ್ಟವಂತರು ಎಂದು ಹೇಳುವುದು ಕಷ್ಟವಾಗಿದೆ. ನಾಸಿಸಂನ ನಾಚಿಕೆಗೇಡಿನ ಪರಂಪರೆಯನ್ನು ರಷ್ಯಾ ಈ ರೀತಿ ಮುಂದುವರಿಸಿದೆ ಎಂದಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!