ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವದಿಂದ ರಷ್ಯಾವನ್ನು ಹೊರಹಾಕಲು ಉಕ್ರೇನ್ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದಿಂದ ರಷ್ಯಾವನ್ನು ತೆಗೆದುಹಾಕಲು ಉಕ್ರೇನ್ ಕರೆ ನೀಡಲು ಯೋಜಿಸುತ್ತಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.
ನಾಳೆ ನಾವು ಅಧಿಕೃತವಾಗಿ ನಮ್ಮ ನಿಲುವನ್ನು ವ್ಯಕ್ತಪಡಿಸುತ್ತೇವೆ. ನಮಗೆ ತುಂಬಾ ಸರಳವಾದ ಪ್ರಶ್ನೆಯಿದೆ: ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಖಾಯಂ ಸದಸ್ಯರಾಗಿ ಉಳಿಯಲು ಮತ್ತು ವಿಶ್ವಸಂಸ್ಥೆಯಲ್ಲಿರಲು ರಷ್ಯಾಕ್ಕೆ ಅರ್ಹತೆ ಇದೆಯೇ?” ಈ ವಿಚಾರವಾಗಿ “ನಮ್ಮ ಬಳಿ ತಾರ್ಕಿಕ ಉತ್ತರವಿದೆ – ಇಲ್ಲ, ಅವರಿಗೆ ಆ ಅರ್ಹತೆ ಇಲ್ಲ.” ಆದ್ದರಿಂದ ಅವರು ಆ ಸ್ಥಾನದಲ್ಲಿ ಮುಂದುವರೆಯುವುದನ್ನು ನಾವು ಪ್ರಶ್ನಿಸುತ್ತೇವೆ. ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಇರುವ ಯುಎನ್ ಭದ್ರತಾ ಮಂಡಳಿಯಲ್ಲಿ ರಷ್ಯಾದ ವೀಟೋ ಖಾಯಂ ಸ್ಥಾನದ ಪ್ರಶ್ನೆಯನ್ನು ಈಗಾಗಲೇ ರಾಜತಾಂತ್ರಿಕ ವಲಯಗಳಲ್ಲಿ ಚರ್ಚಿಸಲಾಗುತ್ತಿದೆ ಎಂದು ಕುಲೆಬಾ ಹೇಳಿದರು.
ಪ್ರಬಲ ಭದ್ರತಾ ಮಂಡಳಿಯು ಜಾಗತಿಕ ಬಿಕ್ಕಟ್ಟುಗಳನ್ನು ನಿಭಾಯಿಸಲು 15 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಐದು ರಾಷ್ಟ್ರಗಳು ಯಾವುದೇ ನಿರ್ಣಯವನ್ನು ನಿರ್ಬಂಧಿಸಬಹುದಾದ ಪರಮೊಚ್ಚ ವಿಟೋ ಅಧಿಕಾರವಿದೆ.
ಸೆಕ್ಯುರಿಟಿ ಕೌನ್ಸಿಲ್‌ನ ಸುಧಾರಣೆಗಾಗಿ ದೇಶಗಳು ದೀರ್ಘಕಾಲ ಮನವಿ ಮಾಡುತ್ತಿವೆ, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಿಗೆ ಶಾಶ್ವತ ಸ್ಥಾನಗಳಿಗೆ ಬಂದಾಗ ಪ್ರಾತಿನಿಧ್ಯದ ಕೊರತೆಯನ್ನು ಕೆಲವರು ಟೀಕಿಸಿದ್ದಾರೆ. ಜೊತೆಗೆ ಭಾರತದಂತಹ ಪ್ರಭಲ ರಾಷ್ಟ್ರಕ್ಕೆ ವಿಟೋ ಅಧಿಕಾರ ನೀಡಬೇಕು ಎಂದು ಜಾಗತಿಕವಾಗಿ ರಾಷ್ಟ್ರಗಳು ಆಗ್ರಹಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!