ಹೊಸದಿಗಂತ ಡಿಜಿಟಲ್ ಡೆಸ್ಕ್
ರಷ್ಯಾ ಜೊತೆಗಿನ ಭೀಕರ ಯುದ್ಧದಲ್ಲಿ ತನ್ನೆಲ್ಲಾ ಕುಟುಂಬವನ್ನು ಕಳೆದುಕೊಂಡಿದ್ದ ಉಕ್ರೇನ್ ಪ್ರಜೆಯೊಬ್ಬರು ಕಾಶಿಯ ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರದ ಘಾಟ್ ಪ್ರದೇಶದ ಅತಿಥಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಣೆಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ಕುರಿತು ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ನಂತರ 50 ವರ್ಷದ ಕೋಸ್ಟಿಯಾಟಿನ್ ಬೆಲಿಯಾಯೆವ್ ಅವರು ಖಿನ್ನತೆಗೆ ಒಳಗಾಗಿದ್ದರು. ಸ್ಥಳೀಯರೊಂದಿಗೆ ಮಾತನಾಡುವಾಗ ಕಾಶಿಯಲ್ಲಿ ಮರಣಾನಂತರ ‘ಮೋಕ್ಷ’ದ ಬಗ್ಗೆ ಮಾತನಾಡುತ್ತಿದ್ದರು. ಅವರು ಭಾನುವಾರ ಸಸಾರಾಮ್ (ಬಿಹಾರ) ಗೆ ಹೋಗಬೇಕಿತ್ತು, ಆದರೆ ಅವರು ಹೋಗಿರಲಿಲ್ಲ. ಅವರು ಬಾಗಿಲುಗಳನ್ನು ದೀರ್ಘಕಾಲ ತೆರೆಯದಿದ್ದರಿಂದ ಅನುಮಾನಗೊಂಡು ಬಾಗಿಲು ಒಡೆದಾಗ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಭೇಲುಪುರ ಎಸ್‌ಎಚ್‌ಒ ರಮಾಕಾಂತ್ ದುಬೆ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ